ಉದಯವಾಹಿನಿ, ಕೊಪ್ಪಳ: ಜಿಲ್ಲೆಯ ಮುನಿರಾಬಾದ್ ಬಳಿಯ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ಕೆಲಸ ಭರದಿಂದ ಸಾಗಿದ್ದು, 15ಕ್ಕೂ ಹೆಚ್ಚು ಗೇಟ್‌ಗಳ ಅಳವಡಿಕೆ ಕಾರ್ಯ ಸಂಪೂರ್ಣ ಮುಗಿದಿದೆ.
ತುಂಗಭದ್ರಾ ಜಲಾಶಯ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಜಿಲ್ಲೆಗಳ ಜೀವನಾಡಿಯಾಗಿದೆ. ಮೂರು ರಾಜ್ಯದ 8 ಜಿಲ್ಲೆಗಳ 14 ಲಕ್ಷ ಎಕರೆ ಪ್ರದೇಶಕ್ಕೆ ತುಂಗಭದ್ರಾ ಜಲಾಶಯ ನೀರುಣಿಸುತ್ತಿದೆ. ಸದ್ಯ ಜಲಾಶಯಕ್ಕೆ ಹೊಸ ಕ್ರಸ್ಟ್ ಗೇಟ್ ಅಳವಡಿಸುವ ಕೆಲಸ ನಡೆಯುತ್ತಿದ್ದು, 3 ಕ್ರಸ್ಟ್ ಗೇಟ್‌ಗಳ ಟ್ರಯಲ್ ಅಂಡ್ ರನ್ ಕೂಡ ಸಕ್ಸಸ್ ಆಗಿದೆ. ಉಳಿದ 12 ಗೇಟ್‌ಗಳ ಟ್ರೈಯಲ್ ಮಾಡಿ, ಏರಿಸಿ, ಇಳಿಸೋ ಕಾರ್ಯ ಬಾಕಿ ಉಳಿದಿದೆ. 18ನೇ ಗೇಟ್ ಟ್ರಯಲ್ ಅಂಡ್ ರನ್ ಮತ್ತು ಅಳವಡಿಕೆ ಯಶಸ್ವಿಯಾಗಿದೆ.
25 ಹಳೆಯ ಕ್ರಸ್ಟ್ ಗೇಟ್‌ಗಳ ತೆರವು ಕಾರ್ಯ ಸಂಪೂರ್ಣವಾಗಿ ಮುಗಿದಿದ್ದು, ಇನ್ನೂ 2 ಕ್ರಸ್ಟ್ ಗೇಟ್‌ಗಳ ತೆರವು ಕಾರ್ಯಾಚರಣೆ ಜೋರಾಗಿ ನಡೆದಿದೆ. ಈಗಾಗಲೇ 25 ಹೊಸ ಕ್ರಸ್ಟ್‌ಗೇಟ್‌ಗಳ ನಿರ್ಮಾಣ ಪೂರ್ಣಗೊಂಡಿದ್ದು, ಮತ್ತೆ ಎರಡು ಗೇಟ್‌ಗಳು ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಹೊಸಪೇಟೆ ಮತ್ತು ಗದಗನಲ್ಲಿ ತಲಾ ಒಂದೊಂದು ಗೇಟ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. 3 ಹೊಸ ಗೇಟ್‌ಗಳ ಎಲೆಕ್ಟ್ರಿಕ್ ಕೆಲಸವೂ ಪೂರ್ಣಗೊಂಡಿದೆ.

Leave a Reply

Your email address will not be published. Required fields are marked *

error: Content is protected !!