ಉದಯವಾಹಿನಿ, ಇತ್ತೀಚೆಗಷ್ಟೇ ಭಾರತ ಮತ್ತು ಕೆನಡಾ ಯುರೇನಿಯಂ ಪೂರೈಕೆಯಲ್ಲಿ ಪರಸ್ಪರ ಸಹಕಾರದ ಕುರಿತು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದವು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ನಡುವಿನ ಮಾತುಕತೆಯ ನಂತರ ಶೀಘ್ರದಲ್ಲೇ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವನ್ನ ಅಂತಿಮಗೊಳಿಸಲು ಸಹ ನಿರ್ಧರಿಸಲಾಯಿತು. 2030 ರ ಹೊತ್ತಿಗೆ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರವನ್ನ 50 ಶತಕೋಟಿ ಡಾಲರ್‌ಗೆ ಹೆಚ್ಚಿಸುವ ಬಗ್ಗೆಯೂ ಚರ್ಚಿಸಲಾಯಿತು.

ಮೋದಿ-ಕಾರ್ನಿ ಮಾತುಕತೆಯ ನಂತರ, ಎರಡೂ ದೇಶಗಳು ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದವು. ಅವುಗಳಲ್ಲಿ ನಿರ್ಣಾಯಕ ಖನಿಜ ವಲಯದಲ್ಲಿನ ಸಹಕಾರವೂ ಸೇರಿದೆ. ಈ ಒಪ್ಪಂದದ ಬಳಿಕ ಯುರೇನಿಯಂ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿವೆ. ಈ ಒಪ್ಪಂದದಿಂದ ಭಾರತಕ್ಕೆ ಏನು ಲಾಭ? ಯಾವುದೇ ದೇಶ‌ ಯುರೇನಿಯಂ ಅನ್ನು ಅತ್ಯಮೂಲ್ಯ ಆಸ್ತಿ ಎಂದು ಏಕೆ ಪರಿಗಣಿಸುತ್ತದೆ? ಇದರಿಂದ ಆ ದೇಶಕ್ಕೆ ಆಗುವ ಉಪಯುಕ್ತತೆ ಏನು ಅನ್ನೋ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ…

ನೈಸರ್ಗಿಕ ಯುರೇನಿಯಂ ಎಷ್ಟು ಉಪಯುಕ್ತ?
ನೈಸರ್ಗಿಕವಾಗಿ ಕಂಡುಬರುವ ಯುರೇನಿಯಂ ನೇರ ಬಳಕೆಗೆ ಹೆಚ್ಚು ಉಪಯುಕ್ತವಲ್ಲ ಏಕೆಂದರೆ ಇದು ಹೆಚ್ಚಾಗಿ U-238 ಐಸೊಟೋಪ್ ಅನ್ನು ಒಳಗೊಂಡಿರುತ್ತದೆ. ಆದರೆ ಅತ್ಯಂತ ಉಪಯುಕ್ತ ಅಂಶವೆಂದರೆ U-235. ಇದು ನೈಸರ್ಗಿಕ ಯುರೇನಿಯಂನ 0.7% ರಷ್ಟು ಮಾತ್ರ ಇರುತ್ತದೆ. ಅದಕ್ಕಾಗಿಯೇ, ಸಂಸ್ಕರಣೆಯಿಲ್ಲದೆ, ಇದನ್ನು ತ್ಯಾಜ್ಯ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದನ್ನು ನೇರವಾಗಿ ಪರಮಾಣು ಇಂಧನವಾಗಿ ಅಥವಾ ಇತರ ಮುಂದುವರಿದ ಪರಮಾಣು ತಂತ್ರಜ್ಞಾನಗಳಲ್ಲಿ ಬಳಸಲಾಗುವುದಿಲ್ಲ.
ಯುರೇನಿಯಂ ಅನ್ನು ಉಪಯುಕ್ತವಾಗಿಸುವ ಪ್ರಕ್ರಿಯೆಯನ್ನು ಪುಷ್ಟೀಕರಣ ಎಂದು ಕರೆಯಲಾಗುತ್ತದೆ. ಇದು ವಿಶೇಷ ಯಂತ್ರೋಪಕರಣಗಳನ್ನ ಬಳಸಿಕೊಂಡು U-235 ಪ್ರಮಾಣ ಹೆಚ್ಚಿಸುವುದಾಗಿರುತ್ತದೆ. ಇದರ ಶೇಕಡಾವಾರು ಪ್ರಮಾಣ ಹೆಚ್ಚಾದ ನಂತರ, ಅದೇ ಯುರೇನಿಯಂ ವಿದ್ಯುತ್ ಉತ್ಪಾದಿಸುವ ಪರಮಾಣು ರಿಯಾಕ್ಟರ್‌ಗಳಿಗೆ ಇಂಧನವಾಗಬಹುದು. ಅತಿಹೆಚ್ಚು ಸಂಸ್ಕರಿಸುತ್ತಾ ಹೋದಂತೆ ಶಸ್ತ್ರಾಸ್ತ್ರಗಳಿಗೂ ಬಳಸುವ ಉಪಯುಕ್ತ ವಸ್ತುವಾಗಲಿದೆ. ಆದ್ದರಿಂದಲೇ ವಿಶ್ವದಾದ್ಯಂತ ನ್ಯೂಕ್ಲಿಯರ್ ಸುತ್ತಲಿನ ವಿವಾದಗಳು ಒಂದು ದೇಶವು ಯುರೇನಿಯಂ ಅನ್ನು ಹೊಂದಿದೆಯೇ ಇಲ್ಲವೇ ಅನ್ನೋದಕ್ಕಿಂತ ಹೆಚ್ಚಾಗಿ, ಅದರ ಸಂಸ್ಕರಣ ಮಟ್ಟ ಎಷ್ಟಿದೆ ಎಂಬುದನ್ನು ಆಧರಿಸಿರುತ್ತದೆ.

Leave a Reply

Your email address will not be published. Required fields are marked *

error: Content is protected !!