ಉದಯವಾಹಿನಿ, ನುಗ್ಗೆಕಾಯಿ ಸೇವನೆಯಿಂದ ಹಲವು ಆರೋಗ್ಯಕರ ಲಾಭಗಳು, ಹೌದು ನುಗ್ಗೆಯನ್ನು ಹಲವು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ನುಗ್ಗೆಕಾಯಿ ಮನುಷ್ಯನಿಗೆ ಬೇಕಾಗುವ ವಿಟಮಿನ್ ಅಂಶವನ್ನು ಒದಗಿಸಿಕೊಡುತ್ತದೆ, ಅಷ್ಟೇ ಅಲ್ಲದೆ ಇದರಲ್ಲಿ ಹಲವು ಔಷಧಿ ಗುಣಗಳು ಇವೆ ಇದು ಸಾಮಾನ್ಯ ಫ್ಲೂ ಜ್ವರ, ಗಂಟಲ ಬೇನೆ, ಕೆರೆತ, ಶೀತ ಮೊದಲಾದ ವೈರಸ್ ಆಧಾರಿತ ಕಾಯಿಲೆಗಳನ್ನು ಹತ್ತಿಕ್ಕಲು ನೆರವಾಗುತ್ತದೆ. ಇದಕ್ಕಾಗಿ ನುಗ್ಗೇಕಾಯಿಯ ಸೂಪ್ ಅಥವಾ ರಸಂ ಮಾಡಿ ಬಿಸಿಬಿಸಿಯಾಗಿ ಸೇವಿಸುವುದು ಒಳ್ಳೆಯದು.
ಆಯುರ್ವೇದದ ಔಷಧಿಯಾಗಿ ಬಳಕೆಯಾಗುವ ನುಗ್ಗೆ ಸೊಪ್ಪು, ನುಗ್ಗೆಯ ಎಲೆಗಳನ್ನು ಅರೆದು ಕೊಂಚ ಜೇನಿನಲ್ಲಿ ಮಿಶ್ರಣ ಮಾಡಿ ಇದನ್ನು ಎಳನೀರಿನೊಂದಿಗೆ ಸೇವಿಸುವ ಮೂಲಕ ಹೊಟ್ಟೆಯಲ್ಲಿ ಉರಿ ಕಡಿಮೆಯಾಗುತ್ತದೆ. ಅಲ್ಲದೇ ಅತಿಸಾರ, ಕಾಲರಾ, ಜಾಂಡೀಸ್ ಮೊದಲಾದ ಕಾಯಿಲೆಗಳೂ ಶೀಘ್ರವಾಗಿ ಗುಣವಾಗುತ್ತವೆ.
ಹೆಚ್ಚಿನ ಪ್ರಮಾಣದಲ್ಲಿರುವ ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ನುಗಳ ಕಾರಣ ದೇಹದ ಮೂಳೆಗಳು ಇನ್ನೂ ಹೆಚ್ಚಾಗಿ ದೃಢಗೊಳ್ಳಲು ಸಾಧ್ಯವಾಗುತ್ತದೆ. ನಿಯಮಿತವಾಗಿ ಸೇವಿಸುತ್ತಾ ಬಂದರೆ ಕ್ರಮೇಣ ಮೂಳೆಗಳ ದೃಢತೆ ಹೆಚ್ಚುತ್ತಾ ಹೋಗುತ್ತದೆ. ಒಂದು ವೇಳೆ ಗಂಟಲಲ್ಲಿ ಕೆರೆತ, ಶೀತ ಅಥವಾ ಕಫ ಕಟ್ಟಿಕೊಂಡಿದ್ದರೆ ಇದಕ್ಕೆ ನುಗ್ಗೇಕಾಯಿಯ ಸೂಪ್ ಉತ್ತಮ ಪರಿಹಾರವಾಗಿದೆ. ಇದರ ಉರಿಯೂತ ನಿವಾರಕ ಗುಣಗಳು ವಿಶೇಷವಾಗಿ ಶ್ವಾಸ ಸಂಬಂಧಿ ಸೋಂಕುಗಳಿಂದ ರಕ್ಷಿಸಲು ನೆರವಾಗುತ್ತದೆ. ಅಲ್ಲದೇ ಶ್ವಾಸ ಸಂಬಂಧಿ ತೊಂದರೆಗಳಾದ ಅಸ್ತಮಾ, ಮತ್ತು ಕ್ಷಯದಂತಹ ರೋಗಗಳ ವಿರುದ್ದ ಹೋರಾಡುವ ಒಂದು ನೈಸರ್ಗಿಕ ವಿಧಾನವೂ ಆಗಿದೆ..

Leave a Reply

Your email address will not be published. Required fields are marked *

error: Content is protected !!