
ಉದಯವಾಹಿನಿ, ಮಾಸ್ಕೊ : ರಷ್ಯಾ ರಾಜಧಾನಿ ಮಾಸ್ಕೊ ಮೇಲೆ ಉಕ್ರೇನ್ ಡ್ರೋಣ್ ದಾಳಿ ನಡೆಸಿ, 2 ಸರ್ಕಾರಿ ಕಚೇರಿಗಳನ್ನು ಹಾನಿಗೊಳಿಸಿದ್ದು, ಇದರಿಂದಾಗಿ ಹೈ ಅಲರ್ಟ್ ಘೋಷಿಸಲಾಗಿದೆ. ಕಳೆದ ರಾತ್ರಿ ಮಾಸ್ಕೊದ ವಿವಿದೆಡೆ 3 ಡ್ರೋಣ್‍ಗಳು ದಾಳಿ ನಡೆಸಿವೆ. ಇದರಲ್ಲಿ 2 ಕಟ್ಟಡಗಳಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಜಾಗ್ರತ ಕ್ರಮವಾಗಿ ವಿಮಾನ ಹಾರಾಟವನ್ನು ಬಂದ್ ಮಾಡಲಾಗಿದ್ದು, ಮಾಸ್ಕೊದ ವ್ನುಕೊವೊ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ ಮತ್ತು ಇಲ್ಲಿಗೆ ಬರುವ ವಿಮಾನಗಳ ಮಾರ್ಗವನ್ನು ಬದಲಿಸಲಾಗಿದೆ. ಜುಲೈ ತಿಂಗಳ ಆರಂಭದಲ್ಲಿ ಇದೇ ರೀತಿ ಡ್ರೋಣ್ ಮೂಲಕ ದಾಳಿ ನಡೆಸಲಾಗಿತ್ತು ಆದರೆ ಅದನ್ನು ಸೇನಾ ಕಾರ್ಯಚರಣೆ ನಡೆಸಿ ಹೊಡೆದೊಡಿಸಲಾಗಿತ್ತು. ಆದರೆ ಕಳೆದ ರಾತ್ರಿ ಭದ್ರತೆಯನ್ನು ಮೀರಿ ಮಾಸ್ಕೊದ ಪ್ರಮುಖ ವಾಣಿಜ್ಯ ಪ್ರದೇಶಕ್ಕೆ ಡ್ರೋಣ್ ದಾಳಿ ನಡೆಸಿರುವುದು ಆತಂಕ ಸೃಷ್ಟಿಸಿದೆ. ಮಾಸ್ಕೊದ ಸೇನಾಧಿಕಾರಿಗಳು ತುರ್ತು ಸಭೆ ನಡೆಸಿದ್ದು, ಉಕ್ರೇನ್ ಸೇನೆಯನ್ನು ಬಗ್ಗು ಬಡಿಯಲು ಹೊಸ ಕಾರ್ಯತಂತ್ರಗಳ ಬಗ್ಗೆ ಚಿಂತನೆಗಳು ಶುರುವಾಗಿದೆ.
