ಉದಯವಾಹಿನಿ, ಬೆಂಗಳೂರು: ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಈಗ ದೇಶದಲ್ಲಿ ಗ್ಯಾಸ್ ಎಮರ್ಜೆನ್ಸಿ ಸೃಷ್ಟಿ ಮಾಡಿದೆ. ಈಗಾಗಲೇ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿದ್ದು, ಇದೀಗ ಅಡುಗೆ ಎಣ್ಣೆ ಬೆಲೆಯೂ ಏರಿಕೆ ಆಗಿದೆ.
ಗೃಹ ಬಳಕೆಯ 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 60 ರೂಪಾಯಿ ಏರಿಕೆ ಮಾಡುವ ಮೂಲಕ ಸಾಮಾನ್ಯ ವರ್ಗದ ಬೆನ್ನಮೇಲೆ ಮತ್ತೊಂದು ಭಾರ ಹೇರಲಾಗಿತ್ತು. ಈಗ ಅಡುಗೆ ಎಣ್ಣೆ ಬೆಲೆ ಕೂಡ ಏರಿಸಿ ಮತ್ತಷ್ಟು ಭಾರ ಸಾಮಾನ್ಯ ವರ್ಗದ ಕುಟುಂಬಗಳ ಮೇಲೆ ಹೇರಲಾಗಿದೆ. ಹೌದು, ಇರಾನ್ ಇಸ್ರೇಲ್ ಯುದ್ಧದ ಹಿನ್ನೆಲೆ ಅಡುಗೆ ಎಣ್ಣೆ ಪೂರೈಕೆಯಲ್ಲಿಯೂ ಸಹ ವ್ಯತ್ಯಾಸವಾಗಿದ್ದು, ಲೀಟರ್‌ಗೆ 8 ರಿಂದ 10 ರೂ. ಏರಿಕೆಯಾಗಿದೆ.

ಯಾವ ಎಣ್ಣೆ ಎಷ್ಟು ಬೆಲೆ ಏರಿಕೆ?
ಸನ್ ಪ್ಲವರ್ – 163 ರಿಂದ 173 ರೂ.
ಗೋಲ್ಡ್ ವಿನ್ನರ್ – 161 ರಿಂದ 169 ರೂ.
ಫಾರ್ಚೂನ್ ಆಯಿಲ್ – 152 ರಿಂದ 160 ರೂ.
ಪ್ರೀಡಂ ಆಯಿಲ್ – 160 ರಿಂದ 168 ರೂ.
ರುಚಿ ಗೋಲ್ಡ್ – 120 ರಿಂದ 135 ರೂ.

ದೀಪದ ಎಣ್ಣೆಯೂ ದುಬಾರಿ:
ಆನಂದಂ ದೀಪದ ಎಣ್ಣೆ – 125 ರಿಂದ 135 ರೂ.ಗೆ ಏರಿಕೆ
ಮುರುಗನ್ ದೀಪದ ಎಣ್ಣೆ – 125 ರಿಂದ 135 ರೂ.ಗೆ ಏರಿಕೆ
ಆಲಯಂ ದೀಪದ ಎಣ್ಣೆ – 122 ರಿಂದ 132 ರೂ.ಗೆ ಏರಿಕೆ

ಹಾವೇರಿಯಲ್ಲಿ ಅಡುಗೆ ಎಣ್ಣೆ ದರದಲ್ಲಿ ಏರಿಕೆಯಾಗಿದೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಿರಾಣಿ ಶಾಪ್ ಮಾಲೀಕ ಮಹಾವೀರ್, ಒಂದು ಲೀಟರ್ ಎಣ್ಣೆಗೆ 10 ರೂ. ಜಾಸ್ತಿ ಆಗಿದೆ. ಯುಗಾದಿ ಹಬ್ಬದ ಸಮಯದಲ್ಲಿ ಗ್ರಾಹಕರು ವ್ಯಾಪಾರಸ್ಥರೊಂದಿಗೆ ಜಗಳ ಮಾಡುವ ಸ್ಥಿತಿ ಉಂಟಾಗಿದೆ ಎಂದಿದ್ದಾರೆ. ಧಾರವಾಡದಲ್ಲಿಯೂ ಕುಕ್ಕಿಂಗ್ ಆಯಿಲ್ ದರ ಏರಿಕೆಯಾಗಿದ್ದು, ದರ ಏರಿಕೆ ನಿಯಂತ್ರಣಕ್ಕೆ ಅಡುಗೆ ಎಣ್ಣೆಯನ್ನು ಪಡಿತರ ಅಂಗಡಿಯಲ್ಲಿ ನೀಡಬೇಕು ಎಂದು ದಿನಸಿ ಅಂಗಡಿ ಮಾಲೀಕ ಜಾವಿದ್ ಅಧೋನಿ ಹೇಳಿದ್ದಾರೆ.ಇತ್ತ ಕಲಬುರಗಿಯಲ್ಲಿ ಪ್ರತಿ ಅಡುಗೆ ಎಣ್ಣೆ ಪ್ಯಾಕೆಟ್ ಮೇಲೆ 10 ರಿಂದ 12 ರೂಪಾಯಿಗಳಷ್ಟು ದರ ಏರಿಕೆಯಾಗಿದ್ದು, ಒಂದು ವೇಳೆ ಯುದ್ಧ ಹೀಗೆ ಮುಂದುವರೆದರೆ ಪ್ರತಿ ಪ್ಯಾಕೆಟ್ ಮೇಲೆ ಇನ್ನು 10 ರೂಪಾಯಿ ಏರಿಕೆಯಾಗುವುದಾಗಿ ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಈ ಮೂಲಕ ಇಷ್ಟು ದಿನ ಸಿಲಿಂಡರ್ ದರದ ಹೊಡೆತದಿಂದ ಸಂಕಷ್ಟದಲ್ಲಿದ್ದ ಜನ ಸಾಮಾನ್ಯರಿಗೆ ಇದೀಗ ಅಡುಗೆ ಎಣ್ಣೆಯ ಬೆಲೆ ಏರಿಕೆ ಬಿಸಿ ಸಹ ತಟ್ಟಿದೆ.

Leave a Reply

Your email address will not be published. Required fields are marked *

error: Content is protected !!