ಉದಯವಾಹಿನಿ ಪೀಣ್ಯ ದಾಸರಹಳ್ಳಿ: ಅಖಿಲ ಭಾರತ ಕ್ರೈಸ್ತ ಮಹಾಸಭಾ (ರಿ) ಸಂಸ್ಥಾಪಕ ಅಧ್ಯಕ್ಷ ಪ್ರಜ್ವಲ್ ಸ್ವಾಮಿ ಅವರ ನೇತೃತ್ವದಲ್ಲಿ ದಿನಾಂಕ.22.08.2023 ರಂದು ಮಣಿಪುರ ಚಲೋ ಹಮ್ಮಿಕೊಂಡಿದ್ದು. ಮಣಿಪುರ ರಾಜ್ಯದಲ್ಲಿ ಕ್ರೈಸ್ತರ ಮೇಲೆ ದೌರ್ಜನ್ಯ ದಾಳಿ ಹಿಂಸಾಚಾರ ಈಗಾಗಲೇ ಸುಮಾರು 82 ದಿನಗಳಿಂದ ನಿರಂತರವಾಗಿ ನಡೆಯುತ್ತಿದೆ. ಇಲ್ಲಿವರೆಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಮಣಿಪುರ ಸರ್ಕಾರಕ್ಕೆ ಕೇಂದ್ರ ಸರ್ಕಾರ ಕಣ್ಣು ಕಿವಿ ಇಲ್ಲದಂತೆ ಮೂಕ್ಕಾಗಿ ಕುಳಿತುಕೊಂಡಿದೆ ಎಂದು ಅಖಿಲ ಭಾರತ ಕ್ರೈಸ್ತ ಮಹಾಸಭಾ (ರಿ) ಸಂಸ್ಥಾಪಕ ಅಧ್ಯಕ್ಷ ಪ್ರಜ್ವಲ್ ಸ್ವಾಮಿ ದಾಸರಹಳ್ಳಿಯಲ್ಲಿ ಆರೋಪಿಸಿದ್ದಾರೆ. ಅದಲ್ಲದೆ ನಮಗೆ ಬಂದಿರುವ ಮಾಹಿತಿ ಪ್ರಕಾರ ಸರಾಸರಿ ಸುಮಾರು 165 ಹೆಚ್ಚು ಹತ್ಯೆಗಳು, 300ಕ್ಕೂ ಹೆಚ್ಚು ಪ್ರಾರ್ಥನಾ ಕೇಂದ್ರಗಳು ಧ್ವಂಸ, ಆನೇಕ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಬೆತ್ತಲೆ ಮೆರವಣಿಗೆ ದುರ್ಘಟನೆ, ದೇಶವೇ ತಲೆ ತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಹೀನಾಯ ಕೃತ್ಯಗಳಿಂದ ಕ್ರೈಸ್ತ ಸಮುದಾಯವೆ ಆತಂಕಕ್ಕಿಡಾಗಿದೆ ಇದನ್ನು ಖಂಡಿಸಿ ಮಣಿಪುರ ಕ್ರೈಸ್ತ ಸಮುದಾಯಕ್ಕೆ ಅನ್ಯಾಯವಾಗುತ್ತದೆ ಎರಡು ಸರ್ಕಾರಗಳು ನ್ಯಾಯ ಒದಗಿಸ ಬೇಕು ಸೂಕ್ತ ರಕ್ಷಣೆ ಭದ್ರತೆ ಮತ್ತು ದಾಳಿ ಮಾಡುತ್ತಿರುವ ಕಿಡಿಗೆಡಿಗಳಿಗೆ ಕೂಡಲೆ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮಣಿಪುರ ಪೋಲಿಸ್ ಮಹಾನಿರ್ದೇಶರಿಗೆ (DGP) ಭೇಟಿ ಮಾಡಿ ಮನವಿ ಸಲ್ಲಿಸಲು ಮತ್ತು ನಮ್ಮ ಸಮುದಾಯ ಜನರ ನೆರವಿಗಾಗಿ ದಿನಾಂಕ 22 ಆಗಷ್ಟ್ 2023ರಂದು ತೆರಳುತ್ತಿದ್ದು ಎಲ್ಲಾ ಕ್ರೈಸ್ತ ಬಾಂದವರು ಭಗನಿಯರು ಘನ ಸಭಾಪಾಲಕರು ಮಣಿಪುರ ಚಲೋಕ್ಕೆ ಸಹಕಾರ ನೀಡುವವರು ಈ ಖಾತೆಗೆ ಸಂದಾಯ ಮಾಡಬೇಕಾಗಿ ಕೋರುತ್ತೇವೆ ಎಂದುAKHILA BHARATH CRISTHA MAHASABHA (R)
Ac.No.50200052409592
IFSC:HDFC0004192
BHUVNESHWARI NAGAR
8TH MILE BENGALURU.560057
KARNATAKA
PHONE PAY.
GOOGLE PAY & CONTACT
8970223535,
ಅಖಿಲ ಭಾರತ ಕ್ರೈಸ್ತ ಮಹಾಸಭಾ (ರಿ) ಸಂಸ್ಥಾಪಕ ಅಧ್ಯಕ್ಷ ಪ್ರಜ್ವಲ್ ಸ್ವಾಮಿ ಉದಯ ವಾಹಿನಿ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.
