
ಉದಯವಾಹಿನಿ ಪೀಣ್ಯ ದಾಸರಹಳ್ಳಿ: ಕ್ಷೇತ್ರದ ರಾಜಗೋಪಾಲನಗರ ಪೊಲೀಸ್ ಠಾಣಾ ಪೊಲೀಸರಿಂದ ಮಾನವ ಕಳ್ಳ ಸಾಗಾಣಿಕೆ ಜಾಗೃತಿಯ ಪೀಠಿಕೆಗಳ ವಿವರ :- ಮಾನವನ ಕಳ್ಳ ಸಾಗಣೆ’ ‘ಮನುಷ್ಯ ಮಾರಾಟಕ್ಕಿಲ್ಲ’ ಮಾನವ ಕಳ್ಳ ಸಾಗಾಣಿಕೆಯನ್ನು ತಡೆಯುವುದು ನಮ್ಮ ಗುರಿ’ ‘ಮಾನವ ಕಳ್ಳ ಸಾಗಾಣಿಕೆ ಜನರ ಜೀವನವನ್ನು ಕದಿಯುತ್ತಿದೆ’ ಮಾನವ ಕಳ್ಳ ಸಾಗಾಣಿಕೆ ಒಂದು ಗುರುತರ ಅಪರಾಧ’ ಮಾನವ ಕಳ್ಳ ಸಾಗಾಣಿಕೆ ಮಾನವ ಹಕ್ಕುಗಳನ್ನು ಉಲ್ಲಂಘಸುತ್ತದೆ’ ‘ಮಾನವ ಕಳ್ಳ ಸಾಗಾಣಿಕೆ ನಿಲ್ಲಿಸಿ ಒಟ್ಟಾಗಿ ಮಾನವ ಕಳ್ಳ ಸಾಗಾಣಿಕೆಯನ್ನು ಎದುರಿಸೋಣ’ ಎಂದು ಘೋಷಣೆದೊಂದಿಗೆ ಇಂದು ಪೀಣ್ಯ 2ನೇ ಹಂತ ಬಸ್ ನಿಲ್ದಾಣದಲ್ಲಿ ಜನರಿಗೆ ಅರಿವು ಮೂಡಿಸುವ ಕಾರ್ಯವನ್ನು ರಾಜಗೋಪಾಲನಗರ ಪೋಲೀಸ್ ಠಾಣಾ ಅಧಿಕಾರಿಗಳು ಪೊಲೀಸರು ವರ್ಗದವರು ಭಾಗವಹಿಸಿ ಜನರಿಗೆ ಜಾಗೃತಿ ಮೂಡಿಸಿದರು ಈ ಜಾಗೃತಿಯಲ್ಲಿ ಸಾರ್ವಜನಿಕರು ಇದ್ದರು.
