ಉದಯವಾಹಿನಿ, ನವದೆಹಲಿ: ಇರಾನ್ ಯುದ್ಧದ ಬಿಸಿ ಸವಾರರಿಗೆ ತಟ್ಟಿದೆ. ತೈಲ ಕಂಪನಿಗಳು ಪ್ರೀಮಿಯಂ ಪೆಟ್ರೋಲ್ (Petrol) ದರವನ್ನು 2 ರೂ. ಏರಿಕೆ ಮಾಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಭಾರೀ ಏರಿಕೆಯಾದ ಬೆನ್ನಲ್ಲೇ ಪ್ರತಿ ಲೀಟರ್ ಪ್ರೀಮಿಯಂ ಪೆಟ್ರೋಲ್‌ಗೆ 2 ರೂ. ದರ ಏರಿಕೆ ಮಾಡಲಾಗಿದೆ. ಪ್ರೀಮಿಯಂ ಪೆಟ್ರೋಲ್ ದರ ಮಾತ್ರ ಏರಿಕೆಯಾಗಿದ್ದು, ಸಾಮಾನ್ಯ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಪ್ರೀಮಿಯಂ ಪೆಟ್ರೋಲ್‌ನಲ್ಲಿ ಆಕ್ಟೇನ್ ರೇಟಿಂಗ್ ಜಾಸ್ತಿ ಇರುತ್ತದೆ. ಪೆಟ್ರೋಲ್ ಸಾಮಾನ್ಯವಾಗಿ 91 ರ ಆಕ್ಟೇನ್ ರೇಟಿಂಗ್ ಅನ್ನು ಹೊಂದಿದ್ದರೆ ಪ್ರೀಮಿಯಂ ಅಥವಾ ಪವರ್ ಪೆಟ್ರೋಲ್‌ನ ಆಕ್ಟೇನ್ ರೇಟಿಂಗ್ ಸಾಮಾನ್ಯವಾಗಿ 93 ರಿಂದ 97 ಇರುತ್ತದೆ. ಈ ಕಾರಣಕ್ಕೆ ಪ್ರೀಮಿಯಂ ಪೆಟ್ರೋಲ್ ದರ ಜಾಸ್ತಿ ಇರುತ್ತದೆ.
