ಉದಯವಾಹಿನಿ, ಬೆಂಗಳೂರು: ಕೆರೆಗಳ ಪುನರುಜ್ಜೀವನದ ಜೊತೆಯಲ್ಲೇ ಅಂತರ್ಜಲ ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ರಾಜ್ಯದ ಜಲ ಸುಸ್ಥಿರತೆಗೆ ಸರ್ಕಾರ ಬದ್ಧವಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ಎಸ್ ಬೋಸರಾಜು ) ತಿಳಿಸಿದರು.

ಇಂದು ವಿಶ್ವ ಜಲ ದಿನದ ಅಂಗವಾಗಿ 𝗪𝗵𝗲𝗿𝗲 𝗪𝗮𝘁𝗲𝗿 𝗙𝗹𝗼𝘄𝘀 – 𝗘𝗾𝘂𝗮𝗹𝗶𝘁𝘆 𝗚𝗿𝗼𝘄𝘀 ಎಂಬ ವಿಷಯದಡಿ ದಿ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಇಂಡಿಯಾ ಕರ್ನಾಟಕ ರಾಜ್ಯ ಘಟಕ, ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ ಹಾಗೂ ಡಾನ್ ಬಾಸ್ಕೊ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಜಂಟಿಯಾಗಿ ಆಯೋಜಿಸಿದ್ದ ಎರಡು ದಿನಗಳ ತಾಂತ್ರಿಕ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಸರ್ಕಾರ ಕೆಸಿ ವ್ಯಾಲಿ, ಹೆಚ್‌ಎನ್ ವ್ಯಾಲಿ ಮತ್ತು ವೃಷಭಾವತಿ ವ್ಯಾಲಿ ಯೋಜನೆಗಳ ಮೂಲಕ ಜಲ ಸುಸ್ಥಿರತೆಯಲ್ಲಿ ವಿನೂತನ ಹೆಜ್ಜೆ ಇಡುತ್ತಿದೆ. ಈಗಾಗಲೇ ಕೆಸಿ ವ್ಯಾಲಿ ಯೋಜನೆ ಅಡಿಯಲ್ಲಿ 143 ಕೆರೆಗಳು ಹಾಗೂ ಹೆಚ್‌ಎನ್ ವ್ಯಾಲಿ ಅಡಿಯಲ್ಲಿ 65 ಕೆರೆಗಳಿಗೆ ಮರುಜೀವ ನೀಡಲಾಗಿದ್ದು, ಬಯಲು ಸೀಮೆಯ ಒಟ್ಟು 700 ಕೆರೆಗಳನ್ನು ಪುನರುಜ್ಜೀವನಗೊಳಿಸುವ ಗುರಿ ಹೊಂದಲಾಗಿದೆ. ಈ ಯಶಸ್ಸಿನ ಪ್ರೇರಣೆಯಿಂದ, ಬರಪೀಡಿತ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಿಸಲು 1,081 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾದ ವೃಷಭಾವತಿ ವ್ಯಾಲಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!