ಉದಯವಾಹಿನಿ ಕುಶಾಲನಗರ:- ಶಾಸಕಾಂಗ ಕಾರ್ಯಂಗ ಮತ್ತು ನ್ಯಾಯಾಂಗ ಈ ಮೂರು ಅಂಗಗಳನ್ನು ತಿದ್ದಿ ತೀಡಿ ಸರಿದಾರಿಯಲ್ಲಿ ಕರೆದೊಯ್ಯುವ ಅಂಗವೇ ಪತ್ರಿಕ ರಂಗ. ಈ ಕ್ಷೇತ್ರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲು ನನಗೆ ಹೆಮ್ಮೆ ಎನಿಸುತ್ತದೆ ಪತ್ರಿಕ ರಂಗದಲ್ಲಿ ಮಾಡುತ್ತಿರುವ ಈ ಕೆಲಸ ನಿಜಕ್ಕೂ ಶ್ಲಾಘನೀಯ ಎಂದು ಮಡಿಕೇರಿ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಅಪ್ಪಚ್ಚು ರಂಜನ್ ರವರು ಇಂದಿಲ್ಲಿ ಹೇಳಿದರು.
     ಕುಶಾಲನಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ನೂತನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು ಸಮಾರಂಭದ ಅಧ್ಯಕ್ಷತೆಯನ್ನು ಸಂಗಮ ಟಿವಿ ಪ್ರಧಾನ ಸಂಪಾದಕ ಡಾಕ್ಟರ್ ಎಚ್ ಎಮ್ ರಘು ಕೋಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆಪಿ ಚಂದ್ರಕಲಾ ಪುರಸಭಾ ಸದಸ್ಯರಾದ ಅಮೃತ್ ರಾಜ್ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘರ್ಷ ಸಂಚಾಲಕರಾದ  ದಾಮೋದರ ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪ ಹಿರಿಯ ಪತ್ರಕರ್ತರಾದ ಭರಮಣ್ಣ ಬೆಟ್ಟಗೇರಿ. ಟೋನಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ನಾಗೇಶ್ ಉಪಸ್ಥಿತರಿದ್ದರು
ಪ್ರಾಸ್ತಾವಿಕವಾಗಿ ರಘು ಕೋಟಿ ಅವರು ಮಾತನಾಡಿದರು ನಿರೂಪಣೆಯನ್ನು ಉಪನ್ಯಾಸಕಿಯಾದ ಶಾಂತಿಯವರು ಮಾಡಿದರು ನಂದೀಶ್ ರವರು ವೇದಿಕೆಯಲ್ಲಿ ಇದ್ದರು ಜಂಕರ್ ತಂಡದವರಿಂದ ಆರ್ಕೆಸ್ಟ್ರಾ ಏರ್ಪಡಿಸಲಾಗಿತ್ತು. ಬಿ.ಟಿವಿ ವರದಿಗಾರ ಸುಜಿತ್ ಕುಮಾರ್. ಸಹ ಶಿಕ್ಷಕ ಹೆಚ್.ಸಿ ರಮೇಶ್ ಸಂಚಾರಿ ಪೊಲೀಸ್ ಕೆಕೆ ಸ್ವಾಮಿ ಶಿಕ್ಷಕಿ ನಗಿನ ಬಾನು. ಮಂಜೇಗೌಡ. ಉಪನ್ಯಾಸಕ ಮೋಹನ್ ಕುಮಾರ್. ಲೀಲಾಕುಮಾರಿತೂಡಿಕಾನ. ಸುಶೀಲ. ಕೆ ಬಿ ರಾಜು. ಮಾಲದೇವಿ ಸೇರಿದಂತೆ 16 ಮಂದಿಯನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

error: Content is protected !!