ಉದಯವಾಹಿನಿ, ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 5 ದಿನಗಳ ಕದನ ವಿರಾಮ ಘೋಷಣೆಯನ್ನು ಪ್ರಕಟಿಸುವ ಮೊದಲೇ ಯಾರೋ ಹೂಡಿಕೆದಾರರು ಕಚ್ಚಾ ತೈಲದ ಹೂಡಿಕೆಯನ್ನು ಮಾರಿ S&P 500 ಫ್ಯೂಚರ್‌ನಲ್ಲಿ ಬೆಟ್‌ ಮಾಡಿದ ವಿಚಾರ ಈಗ ಬೆಳಕಿಗೆ ಬಂದಿದೆ.

ಈ ಪೋಸ್ಟ್‌ ಪ್ರಕಟಗೊಳ್ಳುವ 14 ನಿಮಿಷದ ಮೊದಲು ಯಾರೋ 192 ದಶಲಕ್ಷ ಡಾಲರ್‌ (ಅಂದಾಜು 1,800 ಕೋಟಿ ರೂ.) ಮೌಲ್ಯದ ಕಚ್ಚಾ ತೈಲ ಫ್ಯೂಚರ್‌ ಮಾರಾಟ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕೆಲ ನಿಮಿಷಗಳಲ್ಲಿ S&P 500 ಫ್ಯೂಚರ್‌ನಲ್ಲಿ 1.5 ಶತಕೋಟಿ ಡಾಲರ್‌ ( ಅಂದಾಜು 14 ಸಾವಿರ ಕೋಟಿ ರೂ.) ಬೆಟ್‌ ಮಾಡಿದ್ದು ಈಗ ಭಾರೀ ಸಂಚಲನ ಮೂಡಿಸಿದೆ.ಯುದ್ಧ ಪ್ರಕಟವಾದ ನಂತರ ಕಚ್ಚಾ ತೈಲದ ಫ್ಯೂಚರ್‌ ಬೆಲೆಗಳು ಏರಿಕೆ ಆಗುತ್ತಿದ್ದರೆ ಷೇರು ಮಾರುಕಟ್ಟೆಗಳು ಪತನಗೊಳ್ಳುತ್ತಾ ಬಂದಿದೆ. ಯಾವುದೇ ಮಹತ್ವದ ಘಟನೆಗಳು ನಡೆಯದ ಸಮಯದಲ್ಲಿ ಯಾರೂ ಧೈರ್ಯವಾಗಿ ಇಷ್ಟೊಂದು ಪ್ರಮಾಣದ ಹಣವನ್ನು ಹೂಡಿಕೆ ಮಾಡುವುದಿಲ್ಲ. ಅದರಲ್ಲೂ ಕಚ್ಚಾ ತೈಲದ ದರ 100 ಡಾಲರ್‌ ದಾಟಿದ ಸಮಯದಲ್ಲಿ ಒಮ್ಮಿದೊಮ್ಮಗೆ ಹಣವನ್ನು ತೆಗೆಯುವುದಿಲ್ಲ. ಅದರಲ್ಲೂ ಈಗ ಯುದ್ಧದ ಸಮಯದಲ್ಲಿ ಯಾವಾಗ ಮಾರುಕಟ್ಟೆ ಏರುತ್ತದೆ, ಇಳಿಕೆಯಾಗುತ್ತದೆ ಎನ್ನುವುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಪರಿಸ್ಥಿತಿ ಹೀಗಿರುವಾಗ ಇಷ್ಟೊಂದು ಪ್ರಮಾಣದ ಹೂಡಿಕೆಯನ್ನು ಮಾಡಿದವರು ಯಾರು ಎನ್ನುವುದೇ ದೊಡ್ಡ ಪ್ರಶ್ನೆ.ಕಂಪನಿಗಳು ಆಗಲಿ ಸರ್ಕಾರದವರೇ ಆಗಲಿ ಮುಂದೆ ಮಹತ್ವದ ನಿರ್ಧಾರ ಕೈಗೊಳ್ಳುವುದಾದರೆ ಆ ವಿಚಾರ ಅವರ ಬಳಿಯಲ್ಲಿ ಇರಬೇಕು. ಆ ವಿಚಾರ ಎಲ್ಲಿಯೂ ಬಹಿರಂಗ ಮಾಡಬಾರದು. ಈ ಕಾರಣಕ್ಕೆ ಇನ್‌ಸೈಡರ್‌ (Insider Trading) ಟ್ರೇಡಿಂಗ್‌ಗೆ ನಿಷೇಧ ಹೇರಲಾಗಿದೆ. ಆದರೆ ಇಲ್ಲಿ ಯಾರೋ ಸರ್ಕಾರದ ಪ್ರತಿನಿಧಿಗಳು ಕದನ ವಿರಾಮದ ಸುದ್ದಿಯನ್ನು ಮೊದಲೇ ಯಾರಿಗೋ ತಿಳಿಸಿದ ಪರಿಣಾಮ ಅವರು S&P 500 ಫ್ಯೂಚರ್‌ನಲ್ಲಿ ಹೂಡಿಕೆ ಮಾಡಿರುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *

error: Content is protected !!