ಉದಯವಾಹಿನಿ, ಬೆಂಗಳೂರು: ಸಾಕು ಕೋಳಿಗಳನ್ನು ತಿಂದು ಹಾಕಿವೆ ಎಂದು ಆರೋಪಿಸಿ ವ್ಯಕ್ತಿಯೋರ್ವ ಗುಂಡು ಹಾರಿಸಿ 2 ಬೀದಿ ನಾಯಿಗಳನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಅವಲಹಳ್ಳಿಯಲ್ಲಿ ನಡೆದಿದೆ.ವೆಂಕಟೇಶ್ ಎಂಬವರ ಮೇಲೆ ಬೀದಿ ನಾಯಿಗಳನ್ನು ಕೊಲೆ ಮಾಡಿರುವ ಆರೋಪ ಹೊರಿಸಲಾಗಿದೆ. ಇಲ್ಲಿನ ಗುಂಡೂರಿನ ಬಳಿಯ ಪಾಶ್ಮಿನ ಬ್ರೂಕ್‌ವುಡ್ಸ್ ಅಪಾರ್ಟ್‌ಮೆಂಟ್‌ ಬಳಿ ಘಟನೆ ನಡೆದಿದೆ. ಸಾಕು ಕೋಳಿಗಳನ್ನು ಕೊಂದಿದೆ ಎಂದು ಆರೋಪಿಸಿ ವೆಂಕಟೇಶ್ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಸದ್ಯ ವೆಂಕಟೇಶ್ ಮೇಲೆ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲೈಸೆನ್ಸ್ ಇರುವ ಡಬ್ಬಲ್ ಬ್ಯಾರಲ್ ಗನ್ ಬಳಸಿ ಆರೋಪಿ ವೆಂಕಟೇಶ್ ನಾಯಿಗಳ ಮೇಲೆ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!