ಉದಯವಾಹಿನಿ,  ನವದೆಹಲಿ: ಏಪ್ರಿಲ್ 1, 2026 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ. ಭಾರತವು ತನ್ನ ದೀರ್ಘಕಾಲದ ಆದಾಯ ತೆರಿಗೆ ಕಾಯ್ದೆಯನ್ನು 1961ರ ಹೊಸ, ಸರಳೀಕೃತ ಆದಾಯ ತೆರಿಗೆ ಕಾಯ್ದೆಯೊಂದಿಗೆ ಬದಲಾಗಲಿದೆ. ನವೀಕರಿಸಿದ ಕಾನೂನು ತೆರಿಗೆ ದರಗಳನ್ನು ಹೆಚ್ಚಿಸದೇ ತೆರಿಗೆ ನಿಯಮಗಳನ್ನು ಸ್ಪಷ್ಟ ಮತ್ತು ಅರ್ಥಮಾಡಿಕೊಳ್ಳಲು ಸುಲಭಗೊಳ್ಳುವಂತೆ ಕೇಂದ್ರ ಸರ್ಕಾರ ಪ್ರಯತ್ನ ಮಾಡಿದೆ.
ತೆರಿಗೆ ವರ್ಷದ ಸರಳೀಕರಣ: ಹಿಂದಿನ ವರ್ಷದ ಆದಾಯಗಳಿಕೆ ಮತ್ತು ಮೌಲ್ಯಮಾಪನ ವರ್ಷ. ಏಪ್ರಿಲ್ 1 ರಿಂದ ಇದನ್ನು ಏಕೀಕೃತ ‘ತೆರಿಗೆ ವರ್ಷ’ ಎಂದು ಬದಲಾಯಿಸಲಾಗುತ್ತದೆ. ಉದಾಹರಣೆಗೆ, 2026-27 ರಲ್ಲಿ ಗಳಿಸಿದ ಆದಾಯವನ್ನು ಕೇವಲ ತೆರಿಗೆ ವರ್ಷ 2026-27 ಎಂದು ಕರೆಯಲಾಗುತ್ತದೆ. ಈ ಬದಲಾವಣೆಯು ತೆರಿಗೆದಾರರಿಗೆ ಫಾರ್ಮ್ 16 ಫೈಲಿಂಗ್‌ಗಳು ಮತ್ತು ತೆರಿಗೆ ಪೋರ್ಟಲ್ ಸಲ್ಲಿಕೆಗಳನ್ನು ಸುಲಭಗೊಳಿಸಲಿದೆ.

ತೆರಿಗೆ ತಜ್ಞ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಯೋಗೇಂದ್ರ ಕಪೂರ್ ಅವರು ಹೊಸ ಆದಾಯ ತೆರಿಗೆ ಕಾಯ್ದೆ ಬಗ್ಗೆ ಮಾತನಾಡಿದ್ದಾರೆ. ಹೊಸ ಕಾನೂನಿನಲ್ಲಿ ಸರಳೀಕೃತ ಭಾಷೆ ಬಳಕೆ ಮತ್ತು ಅನಗತ್ಯ ನಿಬಂಧನೆಗಳನ್ನು ತೆಗೆದುಹಾಕಿದ್ದಕ್ಕಾಗಿ ಅವರು ಇದನ್ನು ಸ್ವಾಗತಿಸಿದ್ದಾರೆ.

ಉದಾಹರಣೆಗೆ, ಮಕ್ಕಳ ಶಿಕ್ಷಣ ಭತ್ಯೆ ತಿಂಗಳಿಗೆ ರೂ. 100 ರಿಂದ ರೂ. 3,000ಕ್ಕೆ ಏರಿಕೆ ಆಗಿದೆ. ಹಾಸ್ಟೆಲ್ ಭತ್ಯೆ 300 ರೂಗಳಿಂದ ರಿಂದ 9,000 ರೂಗಳಿಗೆ ಹೆಚ್ಚಳ ಮಾಡಲಾಗಿದೆ. ಇನ್ನು ಕಚೇರಿ ಊಟದ ಮೇಲಿನ ತೆರಿಗೆ ಮುಕ್ತ ಮಿತಿ ಪ್ರತಿ ಊಟಕ್ಕೆ 50 ರೂಗಳಿಂದ 200ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕಂಪನಿಗಳು ಈಗ ವರ್ಷಕ್ಕೆ 5000ರೂ. ದಿಂದ 15,000 ರೂ. ವರೆಗಿನ ಮೌಲ್ಯದ ತೆರಿಗೆ ಮುಕ್ತ ಹಬ್ಬದ ಉಡುಗೊರೆಗಳು ಅಥವಾ ವೋಚರ್‌ಗಳನ್ನು ಒದಗಿಸಬಹುದು ಎಂದು ಕಪೂರ್ ಹೇಳಿದ್ದಾರೆ.

ಟಿಸಿಎಸ್ ಮತ್ತು ಸಾರ್ವಭೌಮ ಚಿನ್ನದ ಬಾಂಡ್‌: ಹೊಸ ಕಾಯ್ದೆಯು ತೆರಿಗೆ ಅನುಸರಣೆಯನ್ನು ಸರಳೀಕರಿಸುವ ಮತ್ತು ವಿವಾದಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎಂದು ಕಪೂರ್ ಹೇಳಿದ್ದಾರೆ. ತೆರಿಗೆ ಭಯೋತ್ಪಾದನೆ ಎಂದು ಕರೆಯುವುದಕ್ಕೆ ಇದರಲ್ಲಿ ಪರಿಹಾರ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

ಉದಾರೀಕೃತ ರವಾನೆ ಯೋಜನೆ ಎಲ್‌ಆರ್‌ಎಸ್ ಅಡಿ ನಗದು ರವಾನೆಗಳ ಮೇಲಿನ ಮೂಲದಲ್ಲಿ ಸಂಗ್ರಹಿಸಲಾದ ತೆರಿಗೆ ದರಗಳನ್ನು ಶೇಕಡಾ 20 ರಿಂದ ಶೇಕಡಾ 2ಕ್ಕೆ ಕಡಿಮೆ ಮಾಡಲಾಗಿದೆ. ಪರಿಷ್ಕೃತ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಸಂಬಂಧಿತ ತೆರಿಗೆ ವರ್ಷದ ನಂತರ 9 ರಿಂದ 12 ತಿಂಗಳುಗಳಿಗೆ ವಿಸ್ತರಿಸಲಾಗಿದೆ ಎಂದು ಕಪೂರ್​ ಮಾಹಿತಿ ನೀಡಿದ್ದಾರೆ. ದ್ವಿತೀಯ ಮಾರುಕಟ್ಟೆಗಳಲ್ಲಿ ಬಂಡವಾಳ ಲಾಭವಾಗಿ ಖರೀದಿಸಿದ ಸಾರ್ವಭೌಮ ಚಿನ್ನದ ಬಾಂಡ್‌ಗಳಿಂದ ಬರುವ ಲಾಭಗಳ ತೆರಿಗೆಯೂ ಇದರಲ್ಲಿ ಸೇರಿದೆ. ಎನ್‌ಆರ್‌ಐಗಳಿಂದ ಸ್ಥಿರ ಆಸ್ತಿಯ ಖರೀದಿದಾರರು ಈಗ ಪ್ಯಾನ್ ಆಧಾರಿತ ಚಲನ್‌ಗಳನ್ನು ಬಳಸಿಕೊಂಡು ಸೆಕ್ಷನ್ 194IA ಅಡಿ ಟಿಡಿಎಸ್ ಕಡಿತಗೊಳಿಸಬಹುದು. ಡಿವಿಡೆಂಡ್ ಆದಾಯ ಅಥವಾ ಮ್ಯೂಚುವಲ್ ಫಂಡ್ ಯೂನಿಟ್‌ಗಳಿಂದ ಬರುವ ಆದಾಯದ ವಿರುದ್ಧ ಬಡ್ಡಿ ಕಡಿತಗಳನ್ನು ಇನ್ನು ಮುಂದೆ ಅನುಮತಿಸಲಾಗುವುದಿಲ್ಲ. ಹೆಚ್ಚಿನ ಆದಾಯ ಗಳಿಸುವವರಿಗೆ ಹೀಗಿದೆ ಬದಲಾವಣೆ: ಹೆಚ್ಚಿನ ಆದಾಯ ಗಳಿಸುವವರಿಗೆ ಕೆಲವು ಕ್ಷೇತ್ರಗಳಲ್ಲಿ ನಿಯಮಗಳನ್ನು ಬಿಗಿಗೊಳಿಸಲಾಗಿದೆ. ವಾರ್ಷಿಕವಾಗಿ 7.5 ಲಕ್ಷಕ್ಕಿಂತ ಹೆಚ್ಚಿನ ಪಿಎಫ್ ಮತ್ತು ಎನ್‌ಪಿಎಸ್‌ಗೆ ಉದ್ಯೋಗದಾತರ ಕೊಡುಗೆಗಳು ಈಗ ತೆರಿಗೆಗೆ ಒಳಪಡುತ್ತವೆ. ಹೆಚ್ಚುವರಿ ಮೊತ್ತದ ಮೇಲೆ ಗಳಿಸಿದ ಬಡ್ಡಿಯೂ ಸೇರಿದಂತೆ ಕಂಪನಿಯು ಒದಗಿಸುವ ಕಾರುಗಳ ತೆರಿಗೆಗೆ ಒಳಪಡುವ ಮೌಲ್ಯವೂ ಈಗ ಹೆಚ್ಚಾಗಿದೆ. 1.6 ಲೀಟರ್‌ಗಿಂತ ಹೆಚ್ಚಿನ ಎಂಜಿನ್ ಹೊಂದಿರುವ ಕಾರು ಈಗ ಮಾಸಿಕ 7,000 ರೂ. ತೆರಿಗೆಗೆ ಒಳಪಡುತ್ತದೆ. ಜೊತೆಗೆ ಅದಕ್ಕೆ ಚಾಲಕನನ್ನು ಒದಗಿಸಿದರೆ 3,000 ರೂ.ಗಳವರೆ ತೆರಿಗೆಗೆ ಒಳಪಡುತ್ತದೆ.

Leave a Reply

Your email address will not be published. Required fields are marked *

error: Content is protected !!