
ಉದಯವಾಹಿನಿ ದೇವರಹಿಪ್ಪರಗಿ:ತಾಲ್ಲೂಕಿನ ನೂತನ ತಹಶೀಲ್ದಾರ್ ಆಗಿ ಪ್ರಕಾಶ ಬಸವಂತಪ್ಪ ಸಿಂದಗಿ ಅವರು ಸೋಮವಾರದಂದು ಅಧಿಕಾರ ವಹಿಸಿಕೊಂಡರು.
ಇದೇ ವೇಳೆ ನಿರ್ಗಮಿತ ತಹಶೀಲ್ದಾರ್ ಶ್ರೀಮತಿ ಕವಿತಾ ಆರ್ ಅವರನ್ನು ಬೀಳ್ಕೊಡಲಾಯಿತು.
ತಾಲ್ಲೂಕು ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ತಹಶೀಲ್ದಾರ್ ಅವರನ್ನು ಕಚೇರಿಯ ಸಿಬ್ಬಂದಿಯ ಪರವಾಗಿ ಶಿರಸ್ತೆದಾರರಾದ ಸೋಮಶೇಖರ ತಾವರಖೇಡ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
