
ಉದಯವಾಹಿನಿ,ಚಿಂಚೋಳಿ : ಮಹಿಳಾ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಹಣಕಾಸು ಸಾಕ್ಷರತಾ ಕುರಿತು ಮಾಹಿತಿ ನೀಡಲು ಸಕ್ಷಮ ಕೇಂದ್ರ ಉದ್ಘಾಟನೆ ಮಾಡಲಾಗಿದ್ದು ಮಹಿಳೆಯರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲ್ಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ರಾಠೋಡ್ ಹೇಳಿದರು.
ತಾಲ್ಲೂಕಿನ ಐನಾಪೂರ ಗ್ರಾಮ ಪಂಚಾಯತ್ ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಒಕ್ಕೂಟದ ಐನಾಪುರದಲ್ಲಿ ಸಂಜೀವಿನಿ ಯೋಜನೆಯಡಿಯಲ್ಲಿ ಸಕ್ಷಮ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು,ಸ್ವಸಹಾಯ ಸಂಘದ ಎಲ್ಲಾ ಮಹಿಳೆಯರು ಸ್ವಾಲಂಬಿಯಾಗಿ ಜೀವನ ಸಾಧಿಸಲು ಈ ಯೋಜನೆಯು ಉಪಯುಕ್ತವಾಗಿದ್ದು,ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ಕೃಷ್ಣಾ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ನಯಾನ ನೈಕೆ ಮಾತನಾಡಿ ಸ್ವಸಹಾಯ ಸಂಘದ ಮಹಿಳೆಯರು ಹಣದ ವ್ಯವಹಾರ ಮಾಡುವ ವಿಧಾನ ಕುರಿತು ಹಾಗೂ ಉಳಿತಾಯದ ಕುರಿತು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸುವರ್ಣ,ಒಕ್ಕೂಟದ ಅಧ್ಯಕ್ಷೆ ಮಹಾದೇವಿ,ಶಿವಕುಮಾರ, ಬಿ.ರೇಶೆಟ್ಟಿ,ಮಲ್ಲಿಕಾರ್ಜುನ,ಹಾಗೂ ಸ್ವಸಹಾಯ ಸಂಘದ ಅನೇಕ ಮಹಿಳೆಯರು ಇದ್ದರು.
