ಉದಯವಾಹಿನಿ, ಮಾಸ್ಕೋ, ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ಪರಿಣಾಮಗಳನ್ನು ಊಹಿಸುವುದು ಕಷ್ಟ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಈ ಸಂಘರ್ಷವು ಕೋವಿಡ್​ನಂತೆ ಜಾಗತಿಕ ಪರಿಣಾಮ ಬೀರಬಹುದು ಎಂದರು. ಸಂಘರ್ಷವು ಈಗಾಗಲೇ ಇಂಟರ್​ನ್ಯಾಷನಲ್ ಲಾಜಿಸ್ಟಿಕ್ಸ್​, ಉತ್ಪಾದನೆ ಮತ್ತು ಪೂರೈಕೆ ಸರಪಳಿಗಳಿಗೆ ಅಡ್ಡಿ ಪಡಿಸುತ್ತಿದೆ ಮತ್ತು ಹೈಡ್ರೋ ಕಾರ್ಬನ್, ಲೋಹಗಳು ಮತ್ತು ರಸಗೊಬ್ಬರ ಕಂಪನಿಗಳ ಮೇಲೆ ಭಾರೀ ಒತ್ತಡವನ್ನು ಹೇರುತ್ತಿದೆ ಎಂದು ಹೇಳಿದ್ದಾರೆ.

ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲಿ ದಾಳಿಗಳು ಮಧ್ಯಪ್ರಾಚ್ಯವನ್ನು ವ್ಯಾಪಕ ಬಿಕ್ಕಟ್ಟಿನ ಹತ್ತಿರಕ್ಕೆ ತಳ್ಳಿದೆ. ಮಧ್ಯಪ್ರಾಚ್ಯದಲ್ಲಿ ಈಗ ಎದ್ದಿರುವ ಬಿಕ್ಕಟ್ಟು ಬೇಗ ಬಗೆಹರಿಯುವುದಿಲ್ಲ, ಯಾವಾಗ ಅಂತ್ಯವಾಗುತ್ತೆ ಅಂತಾ ಯುದ್ಧ ಆರಂಭಿಸಿದವರಿಗೆ ಗೊತ್ತಿಲ್ಲ.ಯಾವಾಗ ಏನಾಗುತ್ತೋ ಅಂತಾ ಹೇಳಲು ಯಾರಿಗೂ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಮೇಲ್ನೋಟಕ್ಕೆ ಇದು ಕೇವಲ ಮೂರು ದೇಶಗಳ ನಡುವಿನ ಕಾದಾಟದಂತೆ ಕಾಣಿಸಬಹುದು, ಆದರೆ ಸಾಕಷ್ಟು ರಾಷ್ಟ್ರಗಳ ಮೇಲೆ ಇದರ ದುಷ್ಪರಿಣಾಮ ಬೀರುತ್ತಿದೆ.ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವೆ ಫೆಬ್ರವರಿ 28ರಂದು ಯುದ್ಧ ಆರಂಭವಾದಾಗಿನಿಂದ, ರಷ್ಯಾ ಇರಾನ್‌ನ ಪರಿವಾಗಿ ಕೆಲಸ ಮಾಡುತ್ತಿದೆ.ಉಕ್ರೇನ್ ಯುದ್ಧದಲ್ಲಿ ತನಗೆ ನಿರಂತರವಾಗಿ ಆತಂಕ ತಂದೊಡ್ಡಿದ ಅಮೆರಿಕದ ವಿರುದ್ಧ ಸೇಡು ತೀರಿಸಿಕೊಳ್ಳಲು ವ್ಲಾಡಿಮಿರ್‌ ಪುಟಿನ್‌ಗೆ ಇದೊಂದು ಉತ್ತಮ ಅವಕಾಶ ಎಂದೇ ಹೇಳಬಹುದು. ರಷ್ಯಾ ನೀಡುತ್ತಿರುವ ಈ ನೈಜ ಸಮಯದ ಗುಪ್ತಚರ ಮಾಹಿತಿ ಆಧರಿಸಿ, ಇರಾನ್ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಮಾಡುತ್ತಿದೆ.

Leave a Reply

Your email address will not be published. Required fields are marked *

error: Content is protected !!