ಉದಯವಾಹಿನಿ, ಹಿರೇಗುಂಟನೂರು: ಕ್ಷಯರೋಗವು ಕೇವಲ ಒಂದು ಕಾಯಿಲೆಯಲ್ಲ, ಅದು ಒಂದು ಸಾಮಾಜಿಕ ಸಮಸ್ಯೆಯಾಗಿದೆ. ನಾವೆಲ್ಲರೂ ಜಾಗೃತರಾಗಿ ಒಟ್ಟಾಗಿ ಶ್ರಮಿಸಿದರೆ ಭಾರತವನ್ನು ಮಾತ್ರವಲ್ಲದೆ ಇಡೀ ಜಗತ್ತನ್ನು 2030ರ ಒಳಗಾಗಿ ಕ್ಷಯಮುಕ್ತವನ್ನಾಗಿ ಮಾಡಬಹುದಾಗಿದೆ ಎಂದು
ಡಾ.ಮೇಘನಾ ಟಿ.ಆರ್. ಹಿರೇಗುಂಟನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಅಭಿಪ್ರಾಯ ಪಟ್ಟಿದ್ದಾರೆ.
ವಿಶ್ವ ಕ್ಷಯರೋಗ ನಿರ್ಮೂಲನ ದಿನಾಚರಣೆ ಅಂಗವಾಗಿ ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಾ ಸುಧೀರ್ಘಕಾಲದ ಕೆಮ್ಮು, ಜ್ವರ, ಹಸಿವಾಗದೆ ದೇಹದ ತೂಕ ಕಡಿಮೆಯಾಗುವುದು ಕ್ಷಯ ರೋಗದ ಮುಖ್ಯ ಲಕ್ಷಣಗಳು ಯಾರಿಗಾದರೂ ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹಿರೇಗುಂಟನೂರು ಆರೋಗ್ಯ ಕೇಂದ್ರದಲ್ಲಿ ಕ್ಷಯರೋಗಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲಿದ್ದು ರೋಗದ ಬಗ್ಗೆ ನಿರ್ಲಕ್ಷ ವಹಿಸದೆ ವೈದ್ಯರ ಸಲಹೆ ಪಡೆದು ಸಮಯಕ್ಕೆ ಸರಿಯಾಗಿ ಔಷಧ ಸೇವಿಸಿದರೆ ಕ್ಷಯರೋಗದಿಂದ ಗುಣಮುಖರಾಗಬಹುದು ಎಂದು ಸಲಹೆ ನೀಡಿದರು.
“ಹೌದು..! ನಾವು ಕ್ಷಯರೋಗವನ್ನು ಕೊನೆಗಾಣಿಸಬಹುದು” ಎಂಬ ಧ್ಯೇಯವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷೆಣಾಧಿಕಾರಿಗಳಾದ ಪುಟ್ಟುಸ್ವಾಮಿ. ಟಿ ಏಕಾಂತ ಕುಮಾರ್ ಹೆಚ್ ಇಸ್ಮಾಯಿಲ್ ಜಬಿವುಲ್ಲಾ ಹಾಲಾನಾಯ್ಕ್ ಆರೋಗ್ಯ ಸುರಕ್ಷಾಧಿಕಾರಿಗಳಾದ ವೀರಮ್ಮ, ಜ್ಞಾನೇಶ್ವರಿ ಗಂಗಮ್ಮ, ಫಾರ್ಮಸಿ ಅಧಿಕಾರಿ ಪುಷ್ಪವತಿ, ಸಮುದಾಯ ಆರೋಗ್ಯಧಿಕಾರಿಗಳಾದ ಶಿವಕುಮಾರ್, ಪುನೀತ್, ಡಿ.ಗ್ರೂಪ್ ಸಿಬ್ಬಂದಿ ಲೋಕಮ್ಮ ಪ್ರಸನ್ನಕುಮಾರ್ ಹಾಗೂ ಆಶಾಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
