ಉದಯವಾಹಿನಿ, ಬೆಂಗಳೂರು: ಆಗಸ್ಟ್ ತಿಂಗಳು ಆರಂಭವಾಗುತ್ತಿದ್ದಂತೆ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಹಾಲಿನ ಜೊತೆಗೆ ತರಕಾರಿ ಬೆಲೆಯಲ್ಲೂ ಗಣನೀಯವಾಗಿ ಏರಿಕೆಯಾಗಿದೆ.
ತರಕಾರಿ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಕಂಗಾಲಾಗಿದ್ದು, ಒಂದೇ ವಾರದಲ್ಲಿ ತರಕಾರಿ ಬೆಲೆ ದುಪ್ಪಟ್ಟು ಆಗಿರುವುದು ತಲೆ ನೋವಾಗಿ ಪರಿಣಮಿಸಿದೆ. ಪರಿಣಾಮವಾಗಿ ಹೋಟೆಲ್‌ಗಳಲ್ಲೂ ತಿನಿಸು ದರ ಹೆಚ್ಚಳವಾಗಿದೆ.
ಟೊಮೆಟೋ, ೧೫೦ ರೂ. ಮೆಣಸಿನಕಾಯಿ ೫೦ ರೂ. ಕ್ಯಾರೆಟ್ ೫೦ ರೂ. ಶುಂಠಿ ೧೦೦ ರೂ. ಹುರಳಿಕಾಳು ೧೨೫ ರೂ. ಬದನೆಕಾಯಿ ೬೦ ರೂ. ಹುಕೋಸು ೫೦ ರೂ. ಸೌತೆಕಾಯಿ ೪೦ ರೂ. ಡಬ್ಬಲ್ ಬೀನ್ಸ್ ೨೪೦ ರೂ. ಬಟಾಣಿ ೧೯೮ ರೂ. ನುಗ್ಗೇಕಾಯಿ ೬೫ ರೂ. ನವಿಲಿಕೋಸು ೮೦ ರೂ. ಅವರೇಬೇಳೆ ೨೫೦ ರೂ. ಬೆಂಡೆಕಾಯಿ ೭೦ ರೂ. ಬೆಳ್ಳುಳ್ಳಿ ೧೫೦ ರೂ. ಸಬ್ಬಕ್ಕಿ/ನುಗ್ಗೆ ಸೊಪ್ಪು ೧೦೦ ರೂ. ಕೊತ್ತಂಬರಿ ಸೊಪ್ಪು ೯೦ ರೂ. ಕೆಂಪು ಎಲೆಕೋಸು ೧೦೦ ರೂ. ಹೆಸರು ಮೊಳಕೆ ಕಾಳು ೧೦೦ ರೂ. ಕರಿಬೇವು ೫೦ ರೂ. ಸುವರ್ಣಗಡ್ಡೆ ೭೫ ರೂ. ಹಾಗಲಕಾಯಿ ೬೦ ರೂ. ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
