ಉದಯವಾಹಿನಿ, ಟೊಕಿಯೋ : ಕೆಲವರು ಅತಿರೇಕದ ಕೆಲಸಗಳನ್ನು ಮಾಡುತ್ತಾರೆ, ಅವರು ಮಾಡುವ ಇಂತಹ ಕಾರ್ಯಗಳು ಅವರನ್ನು ಹುಚ್ಚ, ಇಲ್ಲವೇ ಮೂರ್ಖ ಎಂದು ಕರೆಯಲು ಪ್ರೇರೇಪಣೆ ನೀಡುತ್ತದೆ.ಮನುಷ್ಯ ಎಂದ ಮೇಲೆ ನೂರಾರು ಕನಸು, ಆಸೆ ಆಕಾಂಕ್ಷೆಗಳು ಇರುವುದು ಸಹಜ. ಆದರೆ ಇಲ್ಲೊಬ್ಬ ಮಹಾಶಯ ತಾನು ಶತಾಯಗತಾಯ ನಾಯಿ ಆಗಲೇಬೇಕು ಬೇಕು ಎಂದು ಆಸೆ ಹೊತ್ತು ಅದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಾಯಿಯಾಗಿ ರೂಪಾಂತರ ಹೊಂದಿದ್ದಾನೆ.ಈ ಅಪರೂಪದ ವಿಲಕ್ಷಣ ಘಟನೆ ಜಪಾನಿನಲ್ಲಿ ಜರುಗಿದೆ. ಜಪಾನ್‌ನ ಟೋಕೋ ಎಂಬ ವ್ಯಕ್ತಿಗೆ ಪ್ರಾಣಿಗಳೆಂದರೆ ಪಂಚ ಪ್ರಾಣ. ಜೊತೆಗೆ ಜನಸಂದಣಿಯಲ್ಲಿ ಪ್ರಾಣಿಯಂತೆ ತಿರುಗುವುದು ಇಷ್ಟವಾದ ವಿಚಾರ,ಹೀಗಾಗಿಯೇ ಟೋಕೊ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಾಯಿಯಾಗಿ ಬದಲಾಗಿದ್ದಾನೆ. ನಾಯಿಯಂತೆ ನಾಲ್ಕು ಕಾಲುಗಳಲ್ಲಿ ರಸ್ತೆಯಲ್ಲಿ ನಡೆದಾ
ಡುತ್ತಿದ್ದಾನೆ.
