ಉದಯವಾಹಿನಿ, ತಿಂಡಿಗೆ ಬಿಸಿಬಿಸಿಯಾಗಿ ಏನಾದರೂ ತಿನ್ನಬೇಕು ಅನಿಸುತ್ತಾ? ಹಾಗಾದ್ರೆ ಪನೀರ್‌ ಪಕೋಡಾ ಮಾಡಿ.. ಟೀ, ಕಾಫಿ ಜೊತೆಗೆ ಸವಿಯಲು ಚೆನ್ನಾಗಿರುತ್ತೆ.ಬೇಕಾಗುವ ಸಾಮಗ್ರಿಗಳು:
* ಶುಂಠಿ ಬೆಳ್ಳುಳ್ಳಿ ಪೇಸ್ಟ್
* ಕೆಂಪು ಮೆಣಸಿನ ಪುಡಿ
* ಚಾಟ್ ಮಸಾಲ
* ಕಸೂರಿ ಮೆಥಿ
* ಪನೀರ್‌
* ಕಡಲೆ ಹಿಟ್ಟು
* ಅಕ್ಕಿ ಹಿಟ್ಟು
* ಅರಿಶಿಣ
* ಅಡುಗೆ ಎಣ್ಣೆ
* ರುಚಿಗೆ ಉಪ್ಪು

ಮಾಡುವ ವಿಧಾನ:
ಒಂದು ಬೌಲ್‍ನಲ್ಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ಚಾಟ್ ಮಸಾಲ, ಕಸೂರಿ ಮೆಥಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಬೇಕು. ನಂತರ ಅದಕ್ಕೆ ಪನೀರ್‌ ತುಂಡುಗಳನ್ನು ಸೇರಿಸಿ, ಮಿಕ್ಸ್ ಮಾಡಿ, ಮುಚ್ಚಿಡಬೇಕು. ಮತ್ತೊಂದು ಬಟ್ಟಲಿನಲ್ಲಿ ಅರಿಶಿಣ, ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಕೆಂಪು ಮೆಣಸಿನ ಪುಡಿ, ಚಾಟ್ ಮಸಾಲ, ಉಪ್ಪು, ಸ್ವಲ್ಪ ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು.

ನಂತರ ಪನೀರ್ ಅನ್ನು ಈ ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಬಿಸಿ ಎಣ್ಣೆಯಲ್ಲಿ ಫ್ರೈ ಮಾಡಬೇಕು. ಬಿಸಿಬಿಸಿ ಪನೀರ್‌ ಪಕೋಡಾ ಚಟ್ನಿಯೊಂದಿಗೆ ಸವಿಯಬಹುದು.

Leave a Reply

Your email address will not be published. Required fields are marked *

error: Content is protected !!