ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿ ಮಾಡೋ ಮೊದಲು ಸರ್ಕಾರ ತಜ್ಞರ ಸಮಿತಿ ರಚನೆ ಮಾಡಬೇಕು ಎಂದು ಎಬಿವಿಪಿ ಸರ್ಕಾರವನ್ನ ಆಗ್ರಹಿಸಿದೆ.
ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಬಿವಿಪಿ ಪ್ರಾಂತ ಕಾರ್ಯದರ್ಶಿ ಗೋಪಿ ರಂಗಸ್ವಾಮಿ, ದ್ವಿಭಾಷಾ ಭಾಷಾ ಸೂತ್ರ ಅನುಷ್ಠಾನ ಮಾಡಲು ಹೊರಟಿರುವ ಸರ್ಕಾರದ ನಿರ್ಧಾರವನ್ನು ನಾವು ವಿರೋಧ ಮಾಡ್ತೀವಿ. ದ್ವಿಭಾಷಾ ಸೂತ್ರ ತರುವ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕಿತ್ತು. ಯಾವುದೇ ಚರ್ಚೆ ಮಾಡದೇ ನಿರ್ಧಾರ ಮಾಡಿದೆ. ನಿನ್ನೆ ತೃತೀಯ ಭಾಷೆ ಪರೀಕ್ಷೆ ನಡೆದಿದೆ. ಸರ್ಕಾರದ ನಿರ್ಧಾರದಿಂದ ಬೇಕಾಬಿಟ್ಟಿ ಎಕ್ಸಾಂ ಬರೆದಿದ್ದಾರೆ. ದ್ವಿಭಾಷಾ ಸೂತ್ರ ತರಬೇಕಾದ್ರೆ ತಜ್ಞರ ಅಭಿಪ್ರಾಯ ಪಡೆದು ಮಾಡಬೇಕು. ತ್ರಿಭಾಷಾ ಸೂತ್ರ ಒಲೈಕೆಗಾಗಿ ಬಂದಿದ್ದಲ್ಲ. ಏಕಾಏಕಿ ದ್ವಿಭಾಷಾ ನೀತಿ ತರೋದು ಸರಿಯಲ್ಲ ಎಂದು ಕಿಡಿಕಾರಿದರು.
