ಉದಯವಾಹಿನಿ, ರಾಯಚೂರು: ಇರಾನ್ ಇಸ್ರೇಲ್ ಯುದ್ಧದ ಎಫೆಕ್ಟ್ ರಾಯಚೂರಿನ ರೊಟ್ಟಿ ಕೇಂದ್ರಕ್ಕೂ ತಟ್ಟಿದೆ. ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಸಿಗದೇ ಇಲ್ಲಿನ ರೊಟ್ಟಿ ಕೇಂದ್ರಗಳು ಒಂದೊಂದಾಗೇ ಬೀಗ ಹಾಕುತ್ತಿವೆ.
ಪ್ರತಿನಿತ್ಯ ಗ್ರಾಹಕರಿಗೆ ಜೋಳದ ರೊಟ್ಟಿ, ಚಪಾತಿ, ರೈಸ್ ಬಗೆಬಗೆಯ ತರಕಾರಿ ಪಲ್ಯ, ಚಟ್ನಿ ಬಡಿಸುತ್ತಿದ್ದ ರೊಟ್ಟಿ ಕೇಂದ್ರಗಳು ಗ್ಯಾಸ್ ಸಿಲಿಂಡರ್ ಇಲ್ಲದೇ ಬಾಗಿಲು ಮುಚ್ಚಿವೆ. ರೂಂ. ನಲ್ಲಿದ್ದುಕೊಂಡು ಓದುವ ವಿದ್ಯಾರ್ಥಿಗಳು, ಬ್ಯಾಚುಲರ್‌ಗಳಿಗೆ ಆಸರೆಯಾಗಿದ್ದ ರೊಟ್ಟಿ ಕೇಂದ್ರಗಳಿಗೆ ಗ್ಯಾಸ್ ಸಿಲಿಂಡರ್ ಎಫೆಕ್ಟ್ ಬಲವಾಗಿ ತಟ್ಟಿದೆ. ಇಷ್ಟು ದಿನ ಒಂದೊಂದು ಅಡುಗೆ ಕಡಿಮೆ ಮಾಡಿಕೊಂಡು ಬಂದಿದ್ದ ರೊಟ್ಟಿ ಕೇಂದ್ರಗಳು ಈಗ ಸಂಪೂರ್ಣವಾಗಿ ಮುಚ್ಚಬೇಕಾಗಿದೆ. ಹೀಗಾಗಿ ಹೊಟೆಲ್ ನಲ್ಲಿ ಊಟ ಮಾಡದೇ ರೊಟ್ಟಿ ಊಟ ಪಾರ್ಸಲ್ ತೆಗೆದುಕೊಂಡು ಹೋಗುತ್ತಿದ್ದವರಿಗೆ ಕಷ್ಟವಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!