ಉದಯವಾಹಿನಿ ತಾಳಿಕೋಟಿ: ಪಟ್ಟಣದ ಪ್ರಮುಖ ಮಾರುಕಟ್ಟೆಯ ರಸ್ತೆಯ ಅಕ್ಕ-ಪಕ್ಕದಲ್ಲಿ ನಿರ್ಮಿಸಿದ ಪೂಟ್‌ಪಾತ್‌ಗಳನ್ನು ಅಂಗಡಿಕಾರರು ಅತಿಕ್ರಮಮಾಡಿದ್ದರು ಇದನ್ನು ಸ್ಥಳೀಯ ಪೋಲೀಸ್ ಇಲಾಖೆ ಇತ್ತೀಚಿಗೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದರು ಇಲಾಖೆಯ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿತ್ತು.
ಆದರೀಗ ಕೇವಲ ತೆರವುಗೊಳಿಸಿದ 15 ದಿನಗಳ ಒಳಗಡೆಯೇ ಮತ್ತೇ ಅಂಗಡಿಕಾರರು ಎಂದಿನ0ತೆ ಪೂಟ್‌ಪಾತ್ ಮೇಲೇಯೆ ತಮ್ಮ ಸರಕುಗಳನ್ನಿಟ್ಟು ಪಾದಚಾರಿಗಳು ಎಂದಿನ0ತೆ ರಸ್ತೆಗಳ ಮಧ್ಯೆ ತಿರುಗಾಡುವಂತೆ ಮಾಡಿದ್ದಾರೆ. ಇದು ನಮ್ಮ ಕೆಟ್ಟವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಇಲಾಖೆಯ ಕಟ್ಟುನಿಟ್ಟಿನ ಕಾರ್ಯಾಚರಣೆಗೂ ಡೊಂಟ್‌ಕೇರ್ ಅನ್ನುವ ಅಂಗಡಿಕಾರರಿಗೆ ಹಿಂದಿನಿAದ ಧೈರ್ಯನೀಡುತ್ತೀರುವವರು ಯಾರು? ಎಂಬ ಪ್ರಶ್ನೆ ಸಾರ್ವಜನಿಕರಿಗೆ ಕಾಡುತ್ತಿದೆ.
ಮಾಜಿ ಶಾಸಕರು ತಮ್ಮ ಅವಧಿಯಲ್ಲಿ ಪಟ್ಟಣದ ಸೌಂದರೀಕರಣಕ್ಕಾಗಿ ಸಾಕಷ್ಟು ಅನುದಾನಕೊಟ್ಟು ವಯಕ್ತಿಕ ಆಸಕ್ತಿಯಿಂದ ಕೆಲಸ ಮಾಡಿಸಿದ್ದರು. ದೊಡ್ಡದಾದ ರಸ್ತೆಗಳು ಎರಡು ಬದಿ ಪಾದಚಾರಿಗಳಿಗೆ ಪೂಟ್‌ಪಾತ್ ರಸ್ತೆ ಮಧ್ಯದಲ್ಲಿ ವಿವಿಧ ಹೂವಿನ ಗಿಡಗಳನ್ನು ನೆಟ್ಟು ಅಲಂಕಾರಿಕ ದೀಪಗಳನ್ನು ಹಾಕಿಸಿದ್ದರು. ಇದರ ಸೌಂರ‍್ಯವನ್ನು ಕಾಪಾಡಿಕೊಂಡು ಹೋಗುವುದು ಪುರಸಭೆಯವರ ಜವಾಬ್ದಾರಿಯಾಗಿತ್ತು. ಈಗ ಪುರಸಭೆಯ ವ್ಯವಸ್ಥೆಯೇ ಹಾಳಾಗಿ ಹಳ್ಳ ಹಿಡಿದಿದೆ ಅವರಿಗೆ ಇದರ ಕುರಿತು ತಲೆಕೆಡಿಸಿಕೊಳ್ಳಲು ಸಮಯವಿಲ್ಲ.
ಪೂಟ್‌ಪಾತ ಅತಿಕ್ರಮಣದಿಂದಾಗಿ ಮುಖ್ಯ ರಸ್ತೆಗಳಲ್ಲಿ ದಿನಾಲೂ ಸಾವಿರಾರು ಪಾದಚಾರಿಗಳು ರಸ್ತೆ ಮಧ್ಯೆದಲ್ಲಿಯೇ ತಿರುಗಾಡುವಂತಾಗಿದೆ. ಇದರ ಜೋತೆಗೆ ಬಿಡಾಡಿ ದನಗಳ ಹಾವಳಿಯಂತೂ ಹೇಳತೀರದಾಗಿದೆ. ರ‍್ರಾಬರ‍್ರಿಯಾಗಿ ಸಂಚರಿಸುವ ದ್ವಿಚಕ್ರವಾಹನ ಸವಾರರು ಯಾರಿಗೆ ಯಾವಾಗ ಕುತ್ತು ತಂದಿಡುತ್ತಾರೋ ಗೊತ್ತಿಲ್ಲದಂತಾಗಿದೆ. ಪೋಲಿಸ್ ಇಲಾಖೆಯವರು ಇದನ್ನು ತಡೆಯಲು ಎಲ್ಲ ರೀತಿಯ ಕ್ರಮಗಳನ್ನು ಜರುಗಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ.
ಸಾರ್ವಜನಿಕರೂ ತಮ್ಮ ಜವಾಬ್ದಾರಿಗಳನ್ನು ಅರಿಯಬೇಕಾಗಿದೆ, ಅಂಗಡಿಕಾರರಿಗೆ ಕಟ್ಟುನಿಟ್ಟಿನ ಆದೇಶವನ್ನು ಕೊಡುವ ಅಗತ್ಯ ಇದೆ. ಇದರಲ್ಲಿ ಯಾವುದೇ ರೀತಿಯ ರಾಜಕೀಯ ಹಸ್ತಕ್ಷೇಪ ಆಗಬಾರದು. ಪೂಟ್‌ಪಾತ್ ತೆರವುಗೊಂಡು ಪಾದಚಾರಿಗಳು ಸರಾಗವಾಗಿ ಸಂಚರಿಸುವAತಾಗಬೇಕು. ಇದು ಅಪಘಾತಗಳ ನಿಯಂತ್ರಣಕ್ಕೆ ಅತ್ಯಗತ್ಯವಾಗಿದೆ.

Leave a Reply

Your email address will not be published. Required fields are marked *

error: Content is protected !!