ಉದಯವಾಹಿನಿ, ಸಾಮಾನ್ಯವಾಗಿ ಚಪಾತಿ ಎಲ್ಲರ ಮನೆಯಲ್ಲೂ ಮಾಡುತ್ತಾರೆ. ಕೆಲವೊಮ್ಮೆ ಮನೆಯಲ್ಲಿ ಚಪಾತಿ ಉಳಿಯುತ್ತದೆ. ಈ ಸಂದರ್ಭದಲ್ಲಿ ಚಪಾತಿಯನ್ನು ಬಿಸಾಕದೇ ಮಕ್ಕಳಿಗೆ ಟಿಫನ್ ಅಥವಾ ಲಂಚ್ ಬಾಕ್ಸ್‌ಗೆ ನೂಡಲ್ಸ್ ಮಾಡಿಕೊಡಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಟೇಸ್ಟೀ ಚಪಾತಿ ನೂಡಲ್ಸ್ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ನೀವೂ ಕೂಡ ನಿಮ್ಮ ಮಕ್ಕಳಿಗೆ ಒಂದ್ಸಲ ಇದನ್ನು ಮಾಡಿಕೊಡಿ. ಖಂಡಿತವಾಗಿಯೂ ಇಷ್ಟಪಟ್ಟು ತಿನ್ನುತ್ತಾರೆ.

ಬೇಕಾಗುವ ಸಾಮಗ್ರಿಗಳು:
ಚಪಾತಿ – 3 ರಿಂದ 4
ಎಣ್ಣೆ – 1 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ
ಹಸಿ ಮೆಣಸಿನಕಾಯಿ ಪೇಸ್ಟ್ – ಸ್ವಲ್ಪ
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಕ್ಯಾರೆಟ್ – 1
ಚಿಕ್ಕದಾಗಿ ಹೆಚ್ಚಿದ ಕ್ಯಾಪ್ಸಿಕಂ – 1 ಕಪ್
ಹೆಚ್ಚಿದ ಟೊಮಾಟೊ – 1
ಉಪ್ಪು – ರುಚಿಗೆ ತಕ್ಕಷ್ಟು
ಟೊಮಾಟೊ ಸಾಸ್, ಸೋಯಾ ಸಾಸ್ ಮತ್ತು ಚಿಲ್ಲಿ ಸಾಸ್ – ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ:
* ಮೊದಲಿಗೆ ಉಳಿದ ಚಪಾತಿಗಳನ್ನು ತೆಗೆದುಕೊಂಡು ಚಾಕುವಿನಿಂದ ನೂಡಲ್ಸ್ ಮಾದರಿಯಲ್ಲಿ ಉದ್ದವಾಗಿ ಮತ್ತು ತಳ್ಳಗೆ ಕತ್ತರಿಸಿಕೊಳ್ಳಿ.
* ನಂತರ ಒಂದು ಪ್ಯಾನ್ ಅಥವಾ ಕಡಾಯಿಯಲ್ಲಿ ಎಣ್ಣೆ ಬಿಸಿಮಾಡಿ.
* ಎಣ್ಣೆ ಕಾದ ಬಳಿಕ ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಗೂ ಹಸಿ ಮೆಣಸಿನಕಾಯಿ ಪೇಸ್ಟ್ ಸೇರಿಸಿ ಒಂದು ನಿಮಿಷ ಹುರಿಯಿರಿ.
* ಈಗ ಈರುಳ್ಳಿ, ಕ್ಯಾರಟ್ ಮತ್ತು ಕ್ಯಾಪ್ಸಿಕಂ ಸೇರಿಸಿ ಮಧ್ಯಮ ಉರಿಯಲ್ಲಿ ಎರಡು ಮೂರು ನಿಮಿಷ ಫ್ರೈ ಮಾಡಿ.
* ತರಕಾರಿಗಳು ಸ್ವಲ್ಪ ಮೃದುವಾದ ನಂತರ ಉಪ್ಪು ಹಾಗೂ ಸಾಸ್‌ಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಕತ್ತರಿಸಿದ ಚಪಾತಿ ತುಂಡುಗಳನ್ನು ಹಾಕಿ ಎಲ್ಲಾ ಸಾಸ್ ಹಾಗೂ ತರಕಾರಿಗಳೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ.
* ಎರಡು ನಿಮಿಷಗಳ ಕಾಲ ಹುರಿದರೇ ಬಿಸಿಬಿಸಿ ಚಪಾತಿ ನೂಡಲ್ಸ್ ಸವಿಯಲು ಸಿದ್ಧ.

Leave a Reply

Your email address will not be published. Required fields are marked *

error: Content is protected !!