ಉದಯವಾಹಿನಿ, ಅಡಿಗೆಮನೆಯಲ್ಲಿ ಒಗ್ಗರಣೆ ಹಾಕೋದು ಎಂದಾಗ ಮೊದಲು ನೆನಪಾಗೋದು ಕರಿಬೇವು ಸೊಪ್ಪು, ಆದರೆ ಕೆಲವೊಮ್ಮೆ ಫ್ರಿಜ್‌ನಲ್ಲಿ ಇಟ್ಟಿದ್ದ ಕರಿಬೇವು ಒಣಗಿ ಹೋಗಿ, ಒಗ್ಗರಣೆಗೆ ಹಾಕಿದರೂ ಆ ಒಗ್ಗರಣೆಯ ಪರಿಮಳವೇ ಬರುವುದಿಲ್ಲ.
ಇಂತಹ ಸಮಸ್ಯೆ ನಿಮಗೂ ಆಗ್ತಿದೆಯಾ? ಹಾಗಿದ್ರೆ ಈ ಸರಳ ಆದರೆ ಉಪಯುಕ್ತ ಟಿಪ್ಸ್ ನಿಮಗಾಗಿ.
ಮೊದಲಿಗೆ, ಕರಿಬೇವನ್ನು ತೊಳೆದು ತಕ್ಷಣ ಫ್ರಿಜ್‌ಗೆ ಇಡಬೇಡಿ. ಅದರಲ್ಲಿ ಇರುವ ತೇವಾಂಶದಿಂದ ಸೊಪ್ಪು ಬೇಗ ಕಪ್ಪಾಗಬಹುದು ಅಥವಾ ಒಣಗಬಹುದು. ಚೆನ್ನಾಗಿ ಒಣಗಿಸಿ ನಂತರ ಟಿಮ್ಯೂ ಪೇಪರ್ ಅಥವಾ ಸ್ವಚ್ಛ ಬಟ್ಟೆಯಲ್ಲಿ ಸುತ್ತಿ ಏರ್‌ಟೈಟ್ ಡಬ್ಬಿಯಲ್ಲಿ ಇಟ್ಟರೆ ಹೆಚ್ಚು ದಿನ ತಾಜಾ ಇರುತ್ತದೆ. ಒಗ್ಗರಣೆಗೆ ಹಾಕುವ ಮೊದಲು ಸೊಪ್ಪನ್ನು 5 ನಿಮಿಷ ತಣ್ಣೀರಿನಲ್ಲಿ ನೆನೆಸಿಟ್ಟರೆ ಅದರ ತಾಜಾತನ ಸ್ವಲ್ಪ ಮಟ್ಟಿಗೆ ಮರಳಿ ಬರುತ್ತದೆ. ಇದರಿಂದ ಎಣ್ಣೆಯಲ್ಲಿ ಹಾಕಿದಾಗ ಮತ್ತೆ ಸುವಾಸನೆ ಬರುತ್ತದೆ. ಇನ್ನೊಂದು ಸುಲಭ ಟಿಪ್ ಎಂದರೆ, ಕರಿಬೇವನ್ನು ಸ್ವಲ್ಪ ಎಣ್ಣೆಯಲ್ಲಿ ಲೈಟ್ ಆಗಿ ಹುರಿದು ಫ್ರಿಜ್‌ನಲ್ಲಿ ಸ್ಟೋರ್ ಮಾಡಬಹುದು. ಬೇಕಾದಾಗ ನೇರವಾಗಿ ಒಗ್ಗರಣೆಗೆ ಬಳಸಿದರೆ ರುಚಿ ಮತ್ತು ಪರಿಮಳ ಎರಡೂ ಚೆನ್ನಾಗಿರುತ್ತವೆ.
ಒಣಗಿದ ಕರಿಬೇವನ್ನು ಹಾಗೇ ಹಾಕುವ ಬದಲು ಅದನ್ನು ಪುಡಿ ಮಾಡಿ ಚಟ್ನ ಪುಡಿ ಅಥವಾ ಅನ್ನಕ್ಕೆ ಮಿಕ್ಸ್ ಮಾಡಿಕೊಳ್ಳಬಹುದು. ಹೀಗೆ ಮಾಡಿದರೆ ರುಚಿಯೂ ಹೆಚ್ಚುತ್ತದೆ, ವ್ಯರ್ಥವೂ ಆಗುವುದಿಲ್ಲ.

Leave a Reply

Your email address will not be published. Required fields are marked *

error: Content is protected !!