ಉದಯವಾಹಿನಿ ತಾಳಿಕೋಟಿ: ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್(ರಿ) ಬೆಂಗಳೂರು ಇದರ ವಿಜಯಪುರ ಜಿಲ್ಲಾ ಅಧ್ಯಕ್ಷರನ್ನಾಗಿ ಹಿರಿಯ ಪತ್ರಕರ್ತ ಅಬ್ದುಲರಹೆಮಾನ್ ಎನ್ ಮೂಕಿಹಾಳ(ಹಿರೂರ) ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಕಳೆದ ೧೫ ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಇವರು ೨೦೧೫ರಲ್ಲಿ ‘ಹಾಯ್ ಹಿರೂರ’ ಹೆಸರಿನಲ್ಲಿ ವಾರಪತ್ರಿಕೆಯನ್ನು ಆರಂಭಿಸಿದ್ದು ಅದರ ಪ್ರಧಾನ ಸಂಪಾದಕರು ಕೂಡಾ ಆಗಿದ್ದಾರೆ. ಅವರ ಈ ಗಣನೀಯ ಸೇವೆಯನ್ನು ಗುರುತಿಸಿ ಇತ್ತೀಚಿಗೆ ಕರ್ನಾಟಕ ಪ್ರೇಸ್ ಕ್ಲಬ್ ಕೌನ್ಸಿಲ್ ಬೆಂಗಳೂರು ಇವರ ವತಿಯಿಂದ ಆಯೋಜಿಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರನ್ನು ವಿಜಯಪೂರ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶಪತ್ರ ನೀಡಿ ಗೌರವಿಸಲಾಯಿತು.
ಆದೇಶ ಪತ್ರದಲ್ಲಿ ಅವರಿಗೆ ವಹಿಸಿದ ಈ ಗುರುತರವಾದ ಜವಾಬ್ದಾರಿಯನ್ನು ಹೆಚ್ಚಿನ ಆಸಕ್ತಿವಹಿಸಿ ನಿರ್ವಹಿಸುವದರೊಂದಿಗೆ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಕಾಯ, ವಾಚ, ಮನಸಾ ಶ್ರಮಿಸಿ ಸಂಸ್ಥೆಯ ಉದ್ದೇಶ ಮತ್ತು ಕಾರ್ಯಚಟುವಟಿಕೆಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸಿ ಸಹಕರಿಸಬೇಕೆಂದು ಕರ್ನಾಟಕ ಪ್ರೆಸ್‌ಕ್ಲಬ್ ಕೌನ್ಸಿಲ್ ರಾಜ್ಯಾಧ್ಯಕ್ಷರಾದ ಟಿ. ಶಿವಕುಮಾರ್ ಅವರು ತಿಳಿಸಿದ್ದಾರೆ.
