ಉದಯವಾಹಿನಿ, ಹುಬ್ಬಳ್ಳಿ: ಇಲ್ಲಿನ ಲವ್ ಜಿಹಾದ್ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಅಜ್ಞಾತ ಸ್ಥಳದಿಂದ ಸಂತ್ರಸ್ತ ಯುವತಿ ವಿಡಿಯೋವೊಂದನ್ನ ಬಿಡುಗಡೆ ಮಾಡಿದ್ದು, ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ಲಭ್ಯವಾಗಿದೆ.
ಜಿಮ್ ಟ್ರೈನರ್ ಸಮೀರ್ ವಿರುದ್ಧ ರೇಪ್‌ ಆರೋಪ ಮಾಡಿರುವ ಸಂತ್ರಸ್ತೆ ಸಮೀರ್‌ ಅತ್ಯಾಚಾರದ ಬಗ್ಗೆ ಎಳೆಎಳೆಯಾಗಿ ಬಿಟ್ಟಿದ್ದಾರೆ.

ವಿಡಿಯೋನಲ್ಲಿ ಸಂತ್ರಸ್ತೆ ಹೇಳಿರುವುದೇನು?
ಸಮೀರ್‌ ಅಕ್ಕ ತೈಸೀಮ್ ಮುಲ್ಲಾ ನನ್ನ ಸ್ನೇಹಿತೆ ಆಕೆಯಿಂದ ಸಮೀರ್ ಪರಿಚಯವಾಗಿತ್ತು. ತೈಸೀಮ್ ಜೊತೆಗೆ ಸ್ನೇಹಿತೆಯಾಗಿ ಹಲವಾರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ. ಬರ್ತ್ ಡೇ ಪಾರ್ಟಿ, ವಿಕೇಂಡ್ ಪಾರ್ಟಿಗೆ ಹೋಗಿದ್ದೆವು. ಸಮೀರ್‌ ಸಹ ಅಲ್ಲಿಗೆ ಬಂದಿದ್ದ, ಇದಾದ ಮೇಲೆ ಸಮೀರ್ ಆತ್ಮೀಯನಾದ. ಒಂದು ದಿನ ಸಮೀರ್ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಆಗ ನನಗೆ ಮತ್ತು ಜ್ಯೂಸ್‌ನಲ್ಲಿ ಬರುವ ಔಷಧ ಬೆರಸಿ ಕೊಟ್ಟು ನನ್ನ ಮೇಲೆ ಅತ್ಯಾಚಾರ ಮಾಡಿ ವಿಡಿಯೋ ಮಾಡಿಕೊಂಡಿದ್ದ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ ಸಂತ್ರಸ್ತೆ.
ಸಮೀರ್‌ ವಿಡಿಯೋ ಮಾಡಿದ್ದು ನನಗೆ ಗೊತ್ತಿರಲಿಲ್ಲ, ವಿಡಿಯೋ ತೋರಿಸಿದ ಮೇಲೆ ನನಗೆ ಗೊತ್ತಾಯಿತು. ಆ ಮೇಲೆ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ ಮೇಲ್ ಮಾಡಿ ನನಗೆ ಮೋಸ ಮಾಡಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾರೆ.

Leave a Reply

Your email address will not be published. Required fields are marked *

error: Content is protected !!