ಉದಯವಾಹಿನಿ, ಚಿಕ್ಕಬಳ್ಳಾಪುರ: ಇರಾನ್ – ಇಸ್ರೇಲ್ ವಾರ್ ಎಫೆಕ್ಟ್ ಪರೋಕ್ಷವಾಗಿ ರೈತರಿಗೂ ತಟ್ಟಿದ್ದು, ಚಿಕ್ಕಬಳ್ಳಾಪುರದ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆಯಲ್ಲಿ ಭಾರೀ ಕುಸಿತ ಕಂಡಿದೆ.ಸಹಜವಾಗಿ ಬೇಸಿಗೆಯಲ್ಲಿ ತರಕಾರಿಗಳಿಗೆ ಹೆಚ್ಚಿನ ಡಿಮ್ಯಾಂಡ್ ಜೊತೆಗೆ ದರವೂ ಹೆಚ್ಚಾಗಿರುತ್ತಿತ್ತು. ಆದ್ರೆ ಈ ಬಾರಿ ಯುದ್ಧದ ಎಫೆಕ್ಟ್‌ನಿಂದ ಅಡುಗೆ ಅನಿಲ ಸಿಗದೇ ಹೋಟೆಲ್‌ಗಳು ಬಂದ್ ಆಗಿರೋದ್ರಿಂದ ತರಕಾರಿಗಳಿಗೆ ಬೇಡಿಕೆ ಇಲ್ಲದಂತಾಗಿದೆ.
ಇದ್ರಿಂದ ತರಕಾರಿಗಳನ್ನ ಖರೀದಿ ಮಾಡಲು ವರ್ತಕರು ಬಾರದೆ ರೇಟ್ ಸಹ ಡೌನ್ ಆಗಿದೆ. 1 ಕೆಜಿ ಟೊಮೆಟೊ 10-12 ರೂಪಾಯಿ, ಕ್ಯಾರೆಟ್ – 8 ರಿಂದ 10 ರೂಪಾಯಿ, ಸೌತೆಕಾಯಿ ಮೂಟೆ 200-250 ರೂಪಾಯಿ, ಮೂಲಂಗಿ 5 ರಿಂದ 6 ರೂಪಾಯಿ, ನವಕೋಲು ಸಹ 5 ರಿಂದ 6 ರೂಪಾಯಿ, ಕಳೆದ ವರ್ಷ ಇದೇ ಸಮಯದಲ್ಲಿ 100 ರಿಂದ 120 ರೂಪಾಯಿ ಇದ್ದ ಬೀನ್ಸ್ ಬೆಲೆ ಇಂದ 30-40 ರೂಪಾಯಿಗೆ ಮಾರಾಟವಾಗಿದೆ. ರೈತರಿಗೆ ಭಾರೀ ನಷ್ಟ ಸಂಭವಿಸುತ್ತಿದೆ.
