ಉದಯವಾಹಿನಿ, ಹಾಸನ: ದಾರಿ ವಿಚಾರಕ್ಕೆ ಗ್ರಾಮದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಈ ವೇಳೆ ಮಹಿಳೆಯನ್ನ ಬೆತ್ತಲೆಗೊಳಿಸಿ ಹಲ್ಲೆಗೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಂಚಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಾ.22ರಂದು ಬೆಳಿಗ್ಗೆ ಗ್ರಾಮದ ಗೋವಿಂದಪ್ಪ, ಕುಮಾರ್ ಹಾಗೂ ಇತರರ ಮನೆಗೆ ತೆರಳಲು ದಾರಿ ನಿರ್ಮಾಣ ವಿಚಾರದಲ್ಲಿ ಗಲಾಟೆ ನಡೆದಿದೆ. ಈ ವೇಳೆ ಗೋವಿಂದಪ್ಪನ ಸಂಬಂಧಿ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆಗೆ ಮುಂದಾಗಿದ್ದು, ಘಟನೆ ಸಂಬಂಧ ಹಳೆಬೀಡು ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.

ಮಹಿಳೆಯ ಸಂಬಂಧಿ ನೀಡಿದ ದೂರು ಆಧರಿಸಿ ಗಂಗಾಬೋವಿ, ಶಿವಕುಮಾರ್, ಸೋಮ, ಕಿರಣ್, ಆನಂದ್, ಪುನೀತ್, ಪ್ರತಾಪ್, ಪ್ರಸನ್ನ, ನಾಗಾಬೋವಿ, ಮಂಜಾಬೋವಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಗಂಗಾಬೋವಿ, ಶಿವಕುಮಾರ್ ಹಾಗೂ ಇತರರು ಮಹಿಳೆ ಮೇಲೆ ಗುಂಪಾಗಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಹಲ್ಲೆ ಸಂಬಂಧ ಪ್ರತಾಪ್, ಸೋಮ, ಮಂಜಾಬೋವಿ, ಕಿರಣರನ್ನು ಈವರೆಗೂ ಬಂಧನ ಮಾಡಿಲ್ಲ ಎಂದು ಮಹಿಳೆಯ ಸಂಬಂಧಿಕರು ಹಾಸನ ಡಿಸಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಎಂಟು ವರ್ಷದಿಂದ ನಮ್ಮನ್ನ ಬಹಿಷ್ಕಾರ ಹಾಕಲಾಗಿದೆ. ಕುಡಿಯಲು ನೀರು ಕೊಡುತ್ತಿಲ್ಲ, ನಮ್ಮನ್ನ ಪ್ರತ್ಯೇಕವಾಗಿ ಇರಿಸಲಾಗಿದ್ದು, ಜೀವ ಬೆದರಿಕೆ ಹಾಕುತ್ತಿದ್ದಾರೆ. ಪದೇ ಪದೇ ಹಲ್ಲೆ, ದೌರ್ಜನ್ಯ ನಡೆಸುತ್ತಿದ್ದು, ರಕ್ಷಣೆ ಕೊಡಿ ಎಂದು ನೊಂದ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!