ಉದಯವಾಹಿನಿ, ಚೆನ್ನೈ: ಏಪ್ರಿಲ್ 23 ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ 28 ಅಭ್ಯರ್ಥಿಗಳನ್ನ ಘೋಷಿಸಿದೆ. ದ್ರಾವಿಡ ಮುನ್ನೇಟ್ರ ಕಳಗಂ ಜೊತೆಗಿನ ಮೈತ್ರಿಯಲ್ಲಿ ಪಕ್ಷಕ್ಕೆ ಹಂಚಿಯಾದ ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನ ಅಂತಿಮಗೊಳಿಸಿದೆ.
ಎಐಸಿಸಿ ನಾಯಕತ್ವ ಹಾಗೂ ರಾಜ್ಯ ಘಟಕದ ಮುಖ್ಯಸ್ಥ ಕೆ. ಸೆಲ್ವಪೆರುಂಥಗೈ ನಡುವಿನ ದೀರ್ಘ ಸಮಾಲೋಚನೆ ಬಳಿಕ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನ ಅಂತಿಮಗೊಳಿಸಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ತಿಳಿಸಿದ್ದಾರೆ. ಹಿರಿಯ ನಾಯಕರೊಂದಿಗೆ ಹಲವು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಎಐಸಿಸಿ ಬಿಡುಗಡೆಗೊಳಿಸಿದ ಅಧಿಕೃತ ಪ್ರಕಟಣೆಯಲ್ಲಿ, ಪ್ರಮುಖ ನಾಯಕರು ಹಾಗೂ ಹಲವು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಸೆಲ್ವಪೆರುಂಥಗೈ ಅವರನ್ನ ಶ್ರೀಪೆರುಂಬುದೂರು (ಎಸ್‌ಸಿ) ಕ್ಷೇತ್ರದಿಂದ ಹಾಗೂ ಡಾ. ಎ.ಚೆಲ್ಲಾ ಕುಮಾರ್ ಅವರನ್ನು ಕೃಷ್ಣಗಿರಿ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಮುಖ್ಯವಾಗಿ ಇತ್ತೀಷೆಗಷ್ಟೇ ಕಾಂಗ್ರೆಸ್ ಸೇರ್ಪಡೆಯಾದ ಪಿಎಂಕೆ ನಾಯಕ ಜಿಕೆಎಂ ತಮಿಳು ಕುಮಾರನ್ ಅವರನ್ನ ಪೆನ್ನಗರಂ ಕ್ಷೇತ್ರದಿಂದ ಅಖಾಡಕ್ಕಿಳಿಸಲಾಗಿದೆ.
ಇತರ ಪ್ರಮುಖ ಅಭ್ಯರ್ಥಿಗಳಲ್ಲಿ, ಪೊನ್ನೇರಿ (SC) ಕ್ಷೇತ್ರದಿಂದ ದುರೈ ಚಂದ್ರಶೇಖರ್, ವೇಲಾಚೇರಿಯಿಂದ ಜೆಎಂಎಚ್ ಆಸ್ಸನ್ ಮೌಲಾನಾ, ಶೋಲಿಂಗೂರಿನಿಂದ ಎಎಂ ಮುನಿರತಿನಂ, ಈರೋಡ್ (ಪೂರ್ವ) ದಿಂದ ಗೋಪಿನಾಥ್ ಪಳನಿಯಪ್ಪನ್ ಮತ್ತು ಉದಗಮಂಡಲಂನಿಂದ ಬಿ ರಾಮಚಂದ್ರನ್, ಶ್ರೀವೈಕುಂಠಂನಿಂದ ಎಸ್. ಊರ್ವಶಿ ಅಮೃತರಾಜ್, ನಂಗುನೇರಿಯಿಂದ ರೂಬಿ ಮನೋಹರನ್ ಮತ್ತು ಕೊಳಚೆಲ್ನಿಂದ ಡಾ. ತರಗೈ ಕತ್ಬರ್ಟ್ ಅವರನ್ನು ಕಣಕ್ಕಿಳಿಸಿದೆ.
