ಉದಯವಾಹಿನಿ, ವಾಷಿಂಗ್ಟನ್: ವಿಶ್ವದ ನಂ.1 ಪೋರ್ನ್‌ಸ್ಟಾರ್ ವೊಬ್ಬರಿಗೆ ಒಂದೇ ತಿಂಗಳಲ್ಲಿ ಬರೋಬ್ಬರಿ 1,000 ಪುರುಷರಿಂದ ಮದುವೆ ಪ್ರಸ್ತಾಪಗಳು ಬಂದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆದ್ರೆ ನನ್ನ ಕನಸಿನ ರಾಜ ಇನ್ನೂ ಸಿಕ್ಕಿಲ್ಲ ಎಂದು ನೀಲಿ ತಾರೆಯೇ ಹೇಳಿಕೊಂಡಿದ್ದಾರೆ.
ಹೌದು. ಈವ್ ಸ್ವೀಟ್ (30) ತನ್ನನ್ನ ಮದ್ವೆಯಾಗಲು ಸಾವಿರಾರು ಪುರುಷರು ಪ್ರಪೋಸಲ್ ಕಳಿಸಿದ್ದಾರೆಂದು ಹೇಳಿದ್ದಾರೆ. ನನ್ನನ್ನ ವೈಯಕ್ತಿಕವಾಗಿ ನೋಡಲು ದೇಶ – ವಿದೇಶಗಳಿಂದಲೂ ಬರ್ತಿದ್ದಾರೆ. ಆದ್ರೆ ನನ್ನ ಕನಸಿನ ರಾಜ, ನಾನು ಯಾರೊಂದಿಗೆ ಜೀವನಪೂರ್ತಿ ಇರಬೇಕೆಂದು ಬಯಸುತ್ತಿದ್ದೀನೋ ಅಂತಹ ಹುಡುಗ ಇನ್ನೂ ಸಿಕ್ಕಿಲ್ಲ ಎಂದು ಹೇಳಿಕೊಂಡಿದ್ದಾರೆ. ಇನ್‌ಸ್ಟಾದಲ್ಲಿ 8 ಲಕ್ಷಕ್ಕೂ ಅಧಿಕ ಹಾಗೂ ಎಕ್ಸ್ ನಲ್ಲಿ 3 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿರುವ ಈವ್ ಸ್ವೀಟ್, ನಾನು ಸ್ವೀಕರಿಸುವ ಸಾವಿರಾರು ಸಂದೇಶಗಳಲ್ಲಿ ಹೆಚ್ಚಿನ ಸಂದೇಶಗಳು ಮದುವೆ ಪ್ರಪೋಸಲ್‌ಗಳೇ ಆಗಿರುತ್ತವೆ. ನೀವು ನನ್ನನ್ನ ಮದುವೆಯಾಗಲು ಬಯಸುತ್ತೀರಾ? ನೀವು ನನ್ನ ಹೆಂಡತಿ ಆಗಿರಬೇಕೆಂದು ಬಯಸುತ್ತೇನೆ ಎಂದೆಲ್ಲಾ ಸಂದೇಶ ಕಳಿಸಿರುತ್ತಾರೆ ಎಂದು ನೀಲಿ ತಾರೆ ಬಹಿರಂಗಪಡಿಸಿದ್ದಾರೆ.
