ಉದಯವಾಹಿನಿ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಆಟೋ ಗ್ಯಾಸ್ (Auto Gas) ಸಮಸ್ಯೆ ಮಿತಿಮೀರಿದೆ. ಯಾವುದೇ ಬಂಕ್‌ಗೆ ಹೋದರೂ ಗ್ಯಾಸ್ ಸಿಗದೇ ಚಾಲಕರು ಪರದಾಡುವಂತಾಗಿದೆ. ಬಂಕ್‌ಗಳಲ್ಲಿ ನೋ ಸ್ಟಾಕ್‌ಬೋರ್ಡ್ ಹಾಕಲಾಗಿದೆ.
ಕೋಲಾರದ ಹೊರವಲಯದ ಮೆಹಬೂಬ್ ಸರ್ವಿಸ್ ಸ್ಟೇಷನ್‌ನಲ್ಲಿ ಗ್ಯಾಸ್ ಖಾಲಿ ಆಗಿದೆ. ಕೋಲಾರ ಬಂಕ್‌ಗೆ ಬೆಂಗಳೂರು ಗ್ರಾಮಾಂತರ, ದೇವನಹಳ್ಳಿ, ದೊಡ್ಡಬಳ್ಳಾಪುರ, ವಿಜಯಪುರದಿಂದ ಬಂದು ಆಟೋ ಚಾಲಕರು ಗ್ಯಾಸ್ ತುಂಬಿಸಿಕೊಳ್ಳುತ್ತಿದ್ದು, ಇಲ್ಲಿ ಸ್ಟಾಕ್ ಖಾಲಿ ಆಗಿದೆ. ಹೀಗಾಗಿ ಪ್ರತಿ ಆಟೋಗೆ 200 ರೂ.ಗೆ ಮಿತಿ ಹೇರಲಾಗಿದೆ.

ಇನ್ನು ರಾಯಚೂರಿನ ಆಟೋ ಚಾಲಕರು ಕೊಂಚ ನಿರಾಳರಾಗಿದ್ದಾರೆ. ಒಂದು ವಾರದಿಂದ ಬಂದ್ ಆಗಿದ್ದ 3 ಎಲ್‌ಪಿಜಿ ಗ್ಯಾಸ್ ಬಂಕ್‌ಗಳು ಶುಕ್ರವಾರ ರಾತ್ರಿಯಿಂದ ಆರಂಭವಾಗಿದೆ. ಆಟೋಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಬಂಕ್ ಮಾಲೀಕರು ಒಂದು ಆಟೋಗೆ 500 ರೂ. ಮಿತಿ ನಿಗದಿ ಮಾಡಿದ್ದಾರೆ. ಅಲ್ಲದೇ ಲೀಟರ್ ಗ್ಯಾಸ್‌ಗೆ 30 ರೂ. ಹೆಚ್ಚು ಮಾಡಿರುವುದಕ್ಕೆ ಚಾಲಕರು ಆಕ್ರೋಶ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!