ಉದಯವಾಹಿನಿ, ಟೆಹ್ರಾನ್,ಇರಾನ್: ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಪರಿಧಿಯ ಬಳಿ ಶನಿವಾರ ಬೆಳಗ್ಗೆ ಒಂದು ಸ್ವಯಂ ಚಾಲಿತ ಆಯುಧ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಸುದ್ದಿ ಸಂಸ್ಥೆ ತಸ್ನಿಮ್ ತಿಳಿಸಿದೆ.
ತಸ್ನಿಮ್ ಸುದ್ದಿ ಸಂಸ್ಥೆಯ ಪ್ರಕಾರ, ಈ ಘಟನೆಯಿಂದ ಸ್ಥಾವರದ ಮುಖ್ಯ ಭಾಗಗಳಿಗೆ ಹಾನಿಯಾಗಿಲ್ಲ. ಆದರೆ, ಹತ್ತಿರದ ಕಟ್ಟಡಕ್ಕೆ ಹಾನಿಯಾಗಿದೆ. ಸುದ್ದಿ ಸಂಸ್ಥೆ ಹೇಳಿಕೊಂಡಿರುವಂತೆ ಉತ್ಪಾದನೆಗೆ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ. ಬುಶೆಹರ್ ಪರ್ಷಿಯನ್ ಕೊಲ್ಲಿಯ ದಕ್ಷಿಣ ಇರಾನ್‌ನಲ್ಲಿದೆ ಮತ್ತು ಇದು ದೇಶದ ಮೊದಲ ವಾಣಿಜ್ಯ ಪರಮಾಣು ವಿದ್ಯುತ್ ಸ್ಥಾವರ ಇದಾಗಿದೆ.

ಸೇತುವೆಗಳು ಮತ್ತು ವಿದ್ಯುತ್ ಸ್ಥಾವರಗಳು ಸೇರಿದಂತೆ ಅದರ ಮೂಲಸೌಕರ್ಯಗಳ ಮೇಲೆ ಸಂಭಾವ್ಯ ದಾಳಿಗಳನ್ನು ನಡೆಸುವುದಾಗಿ ಗುರುವಾರ ಅಮೆರಿಕ​ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಎಚ್ಚರಿಕೆ ನೀಡಿದ್ದರು. ಅಮೆರಿಕ ಮಿಲಿಟರಿ ಇರಾನ್‌ನಲ್ಲಿ ಉಳಿದಿರುವುದನ್ನು ಇನ್ನೂ ನಾಶಮಾಡಲು ಪ್ರಾರಂಭಿಸಿಲ್ಲ ಎಂದು ಕೂಡಾ ಅವರು ಇದೇ ವೇಳೆ ಹೇಳಿದ್ದರು.

ಟ್ರೂಥ್​ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿರುವ ನಮ್ಮ ಮಿಲಿಟರಿ, ವಿಶ್ವದ ಎಲ್ಲೆಡೆಯೂ ಅತ್ಯಂತ ಶ್ರೇಷ್ಠ ಮತ್ತು ಶಕ್ತಿಶಾಲಿ. ಇರಾನ್‌ನಲ್ಲಿ ಉಳಿದಿರುವುದನ್ನು ನಾಶಮಾಡಲು ಪ್ರಾರಂಭಿಸಿಲ್ಲ. ಮುಂದೆ ಸೇತುವೆಗಳು, ನಂತರ ವಿದ್ಯುತ್ ಸ್ಥಾವರಗಳು! ಹೊಸ ಆಡಳಿತ ನಾಯಕತ್ವವು ಏನು ಮಾಡಬೇಕು ಎಂದು ತಿಳಿದಿದೆ ಮತ್ತು ಅದನ್ನು ಬೇಗನೆ ಮಾಡಬೇಕು ಎಂದಿದ್ದರು. ಅಗತ್ಯವಿದ್ದರೆ ಇರಾನ್ ಅನ್ನು ಶಿಲಾಯುಗಕ್ಕೆ ಹಿಂತಿರುಗಿಸಲಾಗುವುದು ಎಂದು ಟ್ರಂಪ್ ಬೆದರಿಕೆ ಹಾಕಿದ್ದರು. ಏತನ್ಮಧ್ಯೆ ಎನ್‌ಬಿಸಿ ನ್ಯೂಸ್ ವರದಿಯ ಪ್ರಕಾರ, ಅಮೆರಿಕದ ಮಿಲಿಟರಿ ವಿಮಾನದ ನಾಶವು ಇರಾನ್‌ನೊಂದಿಗಿನ ರಾಜತಾಂತ್ರಿಕ ಚರ್ಚೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ. ಈ ಘಟನೆಯು ಮಾತುಕತೆಗಳಿಗೆ ಅಡ್ಡಿಯಾಗುತ್ತದೆ ಎಂಬ ಕಲ್ಪನೆಯನ್ನು ತಳ್ಳಿಹಾಕಿದ ಅಧ್ಯಕ್ಷರು, ಇಲ್ಲ, ಖಂಡಿತ ಇಲ್ಲ – ಇಲ್ಲ, ಇದು ಯುದ್ಧ. ನಾವು ಯುದ್ಧದಲ್ಲಿದ್ದೇವೆ ಎಂದು ಹೇಳಿದ್ದಾರೆ. ಯುದ್ಧದ ಸಮಯದಲ್ಲಿ ಅಮೆರಿಕದ ವಿಮಾನದ ನಷ್ಟಕ್ಕೆ ನಾಯಕನ ಮೊದಲ ಸಾರ್ವಜನಿಕ ಪ್ರತಿಕ್ರಿಯೆಯನ್ನು ಈ ಹೇಳಿಕೆಗಳು ಪ್ರತಿನಿಧಿಸುತ್ತವೆ. ಯುದ್ಧ ಕ್ರಮಗಳು ಮತ್ತು ರಾಜತಾಂತ್ರಿಕ ಉಪಕ್ರಮಗಳು ಏಕಕಾಲದಲ್ಲಿ ನಡೆಯುತ್ತಿರುವಾಗ ಇದು ಸಂಭವಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!