
ಉದಯವಾಹಿನಿ ದೇವರಹಿಪ್ಪರಗಿ: ತಾಲೂಕಿನ ಯಾಳವಾರ ಗ್ರಾ ಪಂ ಅಧ್ಯಕ್ಷ-ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಒಟ್ಟು 16 ಜನ ಸದಸ್ಯರಲ್ಲಿ 12 ಜನ ಸದಸ್ಯರು ಮತದಾನ ಮಾಡುವ ಮೂಲಕ ಅಧ್ಯಕ್ಷರಾಗಿ ಚೆನ್ನಾರೆಡ್ಡಿ ಸೊ ನ್ಯಾಮಣ್ಣವರ ಆಯ್ಕೆಯಾದರು ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ರಮಜಾನಬಿ ಇ ಕಾಚೂರ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪುನೀತ್ ಕಟ್ಟಿ ತಿಳಿಸಿದರು.ಚುನಾವಣಾ ಪ್ರಕ್ರಿಯೆಗೆ ಪಿಡಿಒ ಮಲ್ಲಿನಾಥ ಮಸಳಿ ಸೇರಿದಂತೆ ಮಾಜಿ ಗ್ರಾಪಂ ಅಧ್ಯಕ್ಷೆ ನೀಲಮ್ಮ ಉಪ್ಪಾರ, ಉಪಾಧ್ಯಕ್ಷರಾದ ನೀಲಮ್ಮ ಬೂದಿಹಾಳ, ಸದಸ್ಯರುಗಳಾದ ದೊಡ್ಡಪ್ಪಗೌಡ ಹಂಚಲಿ, ಅನಿಲಕುಮಾರ ತೆಲಸಂಗ, ದೇವಿಂದ್ರ ಬಡಿಗೇರ, ಸಣ್ಣಪ್ಪ ಬಡಗಿ, ಪೀರಮ್ಮ ವಾಲಿಕಾರ, ಗೀತಾಬಾಯಿ ಜಾಲವಾದಿ, ಲಕ್ಷ್ಮಿಬಾಯಿ ನಾಯ್ಕೋಡಿ, ಮಲ್ಲಿಕಿಂದ್ರಾಯ ಬೈರಿದೊರೆಗಳು, ಚಂದ್ರಶೇಖರ ಕಡಕೋಳಕರ್, ಕಲಾವತಿ ಅಳ್ಳಗಿ, ಶ್ರೀಕಾಂತಗೌಡ ಪಾಟೀಲ, ಮೀನಾಕ್ಷಿ ನಡುವಿನಮನಿ ಹಾಗೂ ಸಿಬ್ಬಂದಿ ವರ್ಗ ಚುನಾವಣಾ ಕಾರ್ಯದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.ಇದೇ ಸಂದರ್ಭದಲ್ಲಿ ಮಾಜಿ ತಾ ಪಂ ಸದಸ್ಯರಾದ ಎಂ ಸಿ ನ್ಯಾಮಣ್ಣವರ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಸಂಗನಗೌಡ ಹರನಾಳ,ಮಲ್ಲಕಿಂದ್ರಾಯಗೌಡ ನ್ಯಾಮಣ್ಣವರ,ನಾನಗೌಡ ನ್ಯಾಮಣ್ಣವರ, ಯಂಕನಗೌಡ ಮೂಲಿಮನಿ, ಸಂಗನಗೌಡ ತಳೆವಾಡ, ಪ್ರಥಮ ದರ್ಜೆ ಗುತ್ತಿಗೆದಾರರಾದ ಚನ್ನಬಸಪ್ಪಗೌಡ ನ್ಯಾಮಣ್ಣವರ, ನಾಗನಗೌಡ ತೆಗ್ಗಿನಮನಿ, ಸಂಗನಗೌಡ ಎಲರಡ್ಡಿ, ನೀಲಕಂಠರಾಯಗೌಡ ಮೂಲಿಮನಿ, ಯಲ್ಲಪ್ಪ ಬೂದಿಹಾಳ, ಕುಶಪ್ಪ ಮನಗೇರಿ, ಬಾಷಾಸಾಬ ಮೋಮಿನ, ಅಲ್ಲಾಬಕ್ಷ ಮುಲ್ಲಾ, ನಿಂಗನಗೌಡ ಖಾನಾಪುರ, ಶಿವಾನಂದ ನಾಗರಾಳ, ರಾಜು ಕೆಸರಟ್ಟಿ, ರಾಬಸಾಬ ಪೂಜಾರಿ ಗ್ರಾಮದ ಪ್ರಮುಖರು ಗಣ್ಯರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸದಸ್ಯರು ತಮ್ಮ 30 ತಿಂಗಳ ಆಡಳಿತದಲ್ಲಿ ಜನಪರ ಕಾರ್ಯ ನೀಡಿದ ಪರಿಣಾಮ ಎರಡನೆ ಅವಧಿಗೂ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರವಿದೆ ,ನೂತನ ಅಧ್ಯಕ್ಷ ಉಪಾಧ್ಯಕ್ಷರು ತಮ್ಮ ಅವಧಿಯಲ್ಲಿ ಇನ್ನೂ ಹೆಚ್ಚಿನ ಜನಪರ ಕಾರ್ಯ ಮಾಡಿ ಗ್ರಾಮಗಳ ಅಭಿವೃದ್ಧಿಗೆ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರ ಸೇವೆ ಮಾಡಿ.
– ಎಮ್ ಸಿ ನ್ಯಾಮಣ್ಣವರ, ಮಾಜಿ ತಾ ಪಂ ಸದಸ್ಯರು. ಸಂಗನಗೌಡ ಹರನಾಳ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರು ಹಾಗೂ ಚನ್ನಬಸಪ್ಪಗೌಡ ನ್ಯಾಮಣ್ಣವರ ಪ್ರಥಮ ದರ್ಜೆ ಗುತ್ತಿಗೆದಾರರು ಯಾಳವಾರ.
