
ಉದಯವಾಹಿನಿ ಸಿಂಧನೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ರಾಯಚೂರು ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪಂಪಯ್ಯ ಸ್ವಾಮಿ ಸಾಲಿಮಠ ಅಂತರಗಂಗಿ ಸಿಂಧನೂರು ಇವರು ಸಂಯುಕ್ತ ಆಶ್ರಯದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಚನ್ನನಗೌಡ ಪೋಲಿಸ್ ಪಾಟೀಲ್ ಸ್ಮಾರಕ ದತ್ತಿ ರಾಷ್ಟ್ರಪ್ರೇಮ ಮತ್ತು ಕಾರ್ಗಿಲ್ ಯೋಧರ ದತ್ತಿ ಉಪನ್ಯಾಸ ಹಾಗೂ ಮಾಸಿಕ ಕವಿಗೋಷ್ಠಿ ನಗರದ ಅನಿಕೇತನ ಕಾಲೇಜುನಲ್ಲಿ ನಡೆಸಲಾಯಿತುಈ ದತ್ತಿ ಉಪನ್ಯಾಸ ಹಾಗೂ ಮಾಸಿಕ ಕವಿಗೋಷ್ಠಿ ಕಾರ್ಯಕ್ರಮವನ್ನು ಸರ್ವ ಜನಾಂಗದವರಿಗೆ ಪ್ರೀತಿಯ ಪಾತ್ರರಾದ ಕೆ ಕರಿಯಪ್ಪ ಅವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ದತ್ತಿ ದಾನಿ ಸಂಜಯ ಪಾಟೀಲ ಡಿ ಹಚ್ ಕಂಬಳಿ ಮಾತನಾಡಿದರು ಚನ್ನಬಸಯ್ಯ ವೀರೇಶ್ ಹೊಸಳ್ಳಿ ಉದಯ ವಾಹಿನಿ ಕನ್ನಡ ದಿನಪತ್ರಿಕೆ ಸಿಂಧನೂರು ತಾಲ್ಲೂಕು ವರದಿಗಾರರು ಚಂದ್ರಶೇಖರ್ ಯರದಿಹಾಳ ಉದಯ ಕಾಲ ಪತ್ರಿಕೆ ವರದಿಗಾರರು. ಶ್ರೀಮತಿ ಯಲ್ಲಮ್ಮ ಬಾರಕೇರ ಕುಮಾರಿ ಆನಂದಿ ಲಾಹೋಟಿ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿದಂತೆ ಇತರರು ಉಪಸ್ಥಿತರಿದ್ದರು. ಅವರು ಈ ದತ್ತಿ ಉಪನ್ಯಾಸ ಕಾರ್ಯಕ್ರಮ ನಮ್ಮ ಎಲ್ಲ ಹಿರಿಯರನ್ನು ನೆನಪು ಮಾಡಿಕೊಳ್ಳುವುದರ ಮೂಲಕ ಮತ್ತು ಅವರ ಮಾಡಿರುವ ಒಳ್ಳೆಯ ಘಟನೆಗಳನ್ನು ಮೇಲ್ಕು ಹಾಕುವುದರ ಜೊತೆಗೆ ನಮ್ಮ ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪ್ರತಿ ವರ್ಷ ಪ್ರತಿ ತಿಂಗಳಿನಲ್ಲಿ ಇಂಥ ಅದ್ಭುತವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ನಿಜಕ್ಕೂ ದೇಶಕ್ಕೆ ಒಳ್ಳೆಯ ಪ್ರೇರಣೆ ನೀಡಲಿದೆ ನಮ್ಮ ದೇಶ ಮತ್ತು ಕರ್ನಾಟಕದಲ್ಲಿ ನಮ್ಮ ಸಿಂಧನೂರು ಎಲ್ಲ ಜನರ ಭಾಷೆಗಳ ಇದ್ದು ನಮ್ಮ ಕನ್ನಡ ಭಾಷೆಯನ್ನು ನಾವು ನೀವು ಉಳಿಸೋಣ ಎಂದು ಹೇಳಿದರು ಕೆ ಕರಿಯಪ್ಪ
ಜೀವನವನ್ನು ಯಾರಿಗೆ ಯಾಂಗ್ ತಿಳಿಯುತ್ತದೆ ಹಾಗೆ ಮಾಡಿಕೊಂಡು ಹೊರಟಿದ್ದಾರೆ ಯಾವಾಗಲೂ ನೆರೆ ಸಂತ್ರಸ್ತರ ಜೊತೆಗೆ ಪ್ರೀತಿ ಪ್ರೇಮ ಸಹನೆ ವಿಶ್ವಾಸದಿಂದ ಇದ್ದು ಎಲ್ಲ ಸಮಾಜದ ಸರ್ವರನ್ನು ಸಮದೃಷ್ಟಿ ಯಿಂದ ಕಾಣುವಂತಹ ತಿಳಿಯಾದ ಮನಸು ಹೊಂದಿರಬೇಕು. ಬೇಧ ಭಾವ ಮರೆತು ಜಗಜ್ಯೋತಿ ಬಸವಣ್ಣನವರು ಹೇಳುವ ಹಾಗೆ ಎಲ್ಲಾರು ನಮ್ಮವರೇ ಎಂದು ನಮ್ಮ ಆತ್ಮದಲ್ಲಿ ಬೆಳೆಸಿಕೊಂಡ ಮಾತ್ರ ನಿಜವಾದ ರಾಷ್ಟ್ರಪ್ರೇಮ ಹರಡುವುದಕ್ಕೆ ಸಾಧ್ಯ ಎಂದು ಯೋಗ ಗುರುಗಳು ಹಾಗೂ ಪತಂಜಲಿ ಯೋಗ ಸಮಿತಿ ಸಿಂಧನೂರು ಭಾಸ್ಕರ್ ಅವರು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.
ಕಾರ್ಗಿಲ್ ಮತ್ತು ಕವಿಗೋಷ್ಠಿಯಲ್ಲಿ ಎಂ ಸಂಗಪ್ಪ ಬಳ್ಳಾರಿ ಅಮರಗುಂಡಪ್ಪ ಯಮನೂರಪ್ಪ ಶಶಿಧರ ಸ್ವಾಮಿ ಹಿರೇಮಠ ಶ್ರೀಮತಿ ಬಸಮ್ಮ ಶ್ರೀಮತಿ ಸಂಗೀತ ಸಾರಂಗ ಮಠ ಅಮರೇಶ ಕಾರ್ಗಿಲ್ ಕುರಿತು ಸ್ಪ ಕವನ ರಚಿಸಿದರು.
ಕವಿಗೋಷ್ಠಿ ಅಧ್ಯಕ್ಷತೆ ಅಮರಗುಂಡಪ್ಪ ಹುಲ್ಲೂರು ವಹಿಸಿದರು ವಾಸ್ತವಿಕ ಭಾಷಣವನ್ನು ಭಾಷಣವನ್ನು ಮೌಲಪ್ಪ ಮಾಡಶಿರವಾರ ಅವರ ಮಾಡಿದರು.
