ಉದಯವಾಹಿನಿ, ಮಡಿಕೇರಿ: ದೀರ್ಘ ರಜೆಯ ಮೇಲೆ ತಮ್ಮ ಮಕ್ಕಳನ್ನ ಬಿಟ್ಟು ಇರಾನ್‌ನಿಂದಬಂದಿದ್ದ ದಂಪತಿ ಕೊಡಗಿನಲ್ಲೇ ಲಾಕ್‌ ಆಗಿದ್ದಾರೆ. ವಿಮಾನ ಸೇವೆ ರದ್ದಾದ ಕಾರಣ ಇರಾನ್‌ಗೆ ಮರಳಲಾಗದೇ ಕೊಡಗಿನಲ್ಲೇ ಉಳಿಯುವಂತಾಗಿದೆ. ಮತ್ತೊಂದು ಕಡೆ ದಂಪತಿಯ ಪಾಸ್‌ಪೋರ್ಟ್‌ ಅವಧಿ ಮುಕ್ತಾಗೊಳ್ಳುವ ಹಂತದಲ್ಲಿದ್ದು, ಮತ್ತೆ ಇರಾನ್‌ಗೆ ಹೋಗಲು ಸಾಧ್ಯವಾಗುತ್ತೋ ಇಲ್ವೋ ಅನ್ನೋ ಆತಂಕದಲ್ಲಿದ್ದಾರೆ.

ಇರಾನ್‌ ಪ್ರಜೆಯೊಂದಿಗೆ ವಿವಾಹವಾಗಿದ್ದ ಕೊಡಗು (Kodagu) ಮೂಲದ ಮಹಿಳೆ ದೀರ್ಘ ರಜೆಯ ಮೇಲೆ ತವರೂರಾದ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಕಾಂತೂರಿಗೆ ಬಂದಿದ್ದರು. ಕೊಡಗು ಮೂಲದ ಶ್ರೀಮತಿ ನವೀನ್‌ ಅವರು 40 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಇರಾನ್‌ನ ನಾದರ್‌ ಅವರೊಂದಿಗೆ ಪರಿಚಯವಾಗಿತ್ತು. ಬಳಿಕ ಪ್ರೀತಿಸಿ ವಿವಾಹವಾದರು, ನಂತರ ದಂಪತಿ ಇರಾನ್‌ನ ಬೋಜ್‌ನೂರ್‌ ಪ್ರದೇಶದಲ್ಲಿ ನೆಲೆಸಿದ್ದರು.

 

Leave a Reply

Your email address will not be published. Required fields are marked *

error: Content is protected !!