ಉದಯವಾಹಿನಿ, ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸೌಧದ ಬಳಿ ಭದ್ರತಾಲೋಪವಾಗಿದೆ. ವಿಧಾನಸೌಧ ಆವರಣಕ್ಕೆ ಕಾರನ್ನು ನುಗ್ಗಿಸಿ, ಸ್ಪೀಕರ್‌ ಕಾರು ಮೇಲೆ ಇಂಕ್‌ ಎರಚಿ ಆಗಂತುಕರು ಪರಾರಿಯಾಗಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಬಜೆಟ್ ಅಧಿವೇಶನದ ಸಮಯದಲ್ಲಿ ವಿಧಾನಸಭೆಗೆ ಬಾಂಬ್ ಬೆದರಿಕೆ ಕರೆಗಳು ಬಂದಿದ್ದವು. ಇದರ ಬೆನ್ನಲ್ಲೇ ಈ ಘಟನೆ ನಡೆದಿದೆ. ಯುಪಿ ನೋಂದಣಿ ಸಂಖ್ಯೆಯನ್ನು ಹೊಂದಿದ್ದ ಕಾರು ಮಧ್ಯಾಹ್ನ 2 ಗಂಟೆ ಸುಮಾರಿಗೆ ಗೇಟ್ ಸಂಖ್ಯೆ 2 ಅನ್ನು ಮುರಿದು ವಿಧಾನಸಭೆ ಆವರಣವನ್ನು ಪ್ರವೇಶಿಸಿ ನಂತರ ತಪ್ಪಿಸಿಕೊಂಡಿದೆ. UP-26 AZ 8090 ಸಂಖ್ಯೆಯ ಟಾಟಾ ಸಿಯೆರಾ ಕಾರು, ಭದ್ರತೆಗಾಗಿ CRPF ಸಿಬ್ಬಂದಿ ನಿಯೋಜಿಸಲಾಗಿದ್ದ VIP ಪ್ರವೇಶದ್ವಾರದಲ್ಲಿ ಗೇಟ್ ಅನ್ನು ಭೇದಿಸಿ ಒಳಗೆ ಪ್ರವೇಶಿಸಿತು. ತಡೆಗೋಡೆಯನ್ನು ಭೇದಿಸಿ ಚಾಲಕ ವಾಹನವನ್ನು ಹಠಾತ್ತನೆ ನಿಲ್ಲಿಸಿ, ಗೇಟ್ ಬಳಿ ಹೂಗುಚ್ಛವನ್ನು ಇರಿಸಿ ನಂತರ ಎಸ್ಕೇಪ್‌ ಆಗಿದ್ದಾನೆ

 

Leave a Reply

Your email address will not be published. Required fields are marked *

error: Content is protected !!