
ಉದಯವಾಹಿನಿ, ಮುಂಬೈ: ಟಿಸಿಎಸ್ ‘ಮತಾಂತರ’ ಆರೋಪಿ ನಿದಾ ಖಾನ್ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದಾಳೆ. ‘ನಾನು ತುಂಬು ಗರ್ಭಿಣಿ. ನನಗೆ ಜಾಮೀನು ಕೊಡಿ’ ಎಂದು ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದಾಳೆ. ಐಟಿ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನ ನಾಸಿಕ್ ಘಟಕದಲ್ಲಿ ಬಲವಂತದ ಧಾರ್ಮಿಕ ಮತಾಂತರದ ಆರೋಪ ಹೊತ್ತಿರುವ ನಿದಾ ಖಾನ್ ಈಗ ಮುಂಬೈನಲ್ಲಿದ್ದಾಳೆ.
ಪ್ರಸ್ತುತ ಪರಾರಿಯಾಗಿರುವ ಖಾನ್, ನಾಸಿಕ್‌ನ ಸ್ಥಳೀಯ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿ ಕೋರಿ ಅರ್ಜಿ ಸಲ್ಲಿಸಿದ್ದಾಳೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ಆಕೆಯನ್ನು ಕಸ್ಟಡಿಗೆ ತರಲು ಪ್ರಯತ್ನ ಮುಂದುವರಿಸಿದೆ. 25 ವರ್ಷದ ನಿದಾ ಖಾನ್ 2021ರಲ್ಲಿ ನಾಸಿಕ್‌ನಲ್ಲಿರುವ ಟಿಸಿಎಸ್‌ನ ಬಿಪಿಒ ಘಟಕಕ್ಕೆ ಸೇರಿದ್ದಳು. ನಾಸಿಕ್‌ನ ಟಿಸಿಎಸ್ ಕಚೇರಿಯಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಬಲವಂತದ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಒಂಬತ್ತು ದೂರುಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
