ಉದಯವಾಹಿನಿ, ಬೆಂಗಳೂರು: ಕರ್ನಾಟಕ ಸರ್ಕಾರದ ಕಾನೂನು ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಕೆವಿಕೆಯಲ್ಲಿ ನಡೆದ 22ನೇ ದ್ವೈವಾರ್ಷಿಕ ರಾಜ್ಯಮಟ್ಟದ ನ್ಯಾಯಾಂಗ ಅಧಿಕಾರಿಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ವೇದಿಕೆ ಮೇಲೆ ಕನ್ನಡದಲ್ಲಿ ಮಾತಾಡಿ ಸಿಎಂಗೆ ವ್ಯವಸ್ಥೆ ಬಗ್ಗೆ ಮನವರಿಕೆ ಮಾಡಿದರು. ನ್ಯಾಯಾಲಯಗಳ ಕಟ್ಟಡ ನಿರ್ಮಾಣಕ್ಕೆ, ನ್ಯಾಯಾಧೀಶರ ನಿವಾಸಗಳ ನಿರ್ಮಾಣ ಮಾಡುವುದು ವಿವಿಧ ಜಿಲ್ಲೆಗಳಲ್ಲಿ ಅತ್ಯವಶ್ಯಕವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಕಳಿಸಿದಾಗ ಮಂದಗತಿಯಲ್ಲಿ ರಾಜ್ಯ ಸರ್ಕಾರಿ ಅಧಿಕಾರಿಗಳು ಅನೇಕ ಬಾರಿ ಗಮನಹರಿಸುತ್ತಾರೆ. ಪ್ರತಿವರ್ಷ ವ್ಯಾಜ್ಯಗಳು ಹೆಚ್ಚು ದಾಖಲಾತಿ ಆಗ್ತಿದೆ. 2023 ರಲ್ಲಿ 17 ಲಕ್ಷ ಇದ್ದು, 2025 ರಲ್ಲಿ 22 ಲಕ್ಷ ಕೇಸ್ ದಾಖಲಾಗಿವೆ. ಹೊಸ ಕಾನೂನುಗಳು ಮಂಡನೆ ಆಗುತ್ತಿದೆ. ಕಾನೂನು ಅಡಿಯಲ್ಲಿ ನ್ಯಾಯ ವಿತರಣೆ ಮಾಡಬೇಕಾಗುತ್ತದೆ. ಮೂಲಸೌಕರ್ಯಗಳು, ನ್ಯಾಯಾಧೀಶರ ನೇಮಕಾತಿ ಬಗ್ಗೆ, ಸರ್ಕಾರಿ ವಕೀಲರ ನೇಮಕದ ಬಗ್ಗೆ ನ್ಯಾಯಾಲಯಗಳು ಪ್ರಸ್ತಾವನೆ ಸಲ್ಲಿಸಿದಾಗ ತಮ್ಮ ಅಧಿಕಾರಿಗಳು ಮಂದಗತಿಯಲ್ಲಿ ಅಥವಾ ಅದರ ಬಗ್ಗೆ ಗಮನಹರಿಸದೇ ಬೇಡಿಕೆಗಳನ್ನ ಕಡಿತಗೊಳಿಸಿ ಅನುಮೋದಿಸಿರೋ ಉದಾಹರಣೆಗಳು ಬೇಕಾದಷ್ಟು ಇವೆ ಅಂತ ಅಸಮಾಧಾನ ಹೊರ ಹಾಕಿದ್ರು.
ಕಳೆದ 2 ವರ್ಷಗಳಲ್ಲಿ ಬೆಂಗಳೂರು ಕಲಬುರ್ಗಿ, ಧಾರವಾಡ ಹೈಕೋರ್ಟ್ ನ 666 ಹುದ್ದೆ ಅನುಮೋದನೆಗೆ ಕೇಳಿದಾಗ ತಮ್ಮ ಅಧಿಕಾರಿಗಳು 238 ಹುದ್ದೆಗಳನ್ನ ಮಾತ್ರ ಅನುಮೋದಿಸಿರುತ್ತಾರೆ. ಇದೇ ರೀತಿ ಜಿಲ್ಲಾ ನ್ಯಾಯಾಲಯಗಳಿಗೆ 680 ಹುದ್ದೆ ಕೇಳಿದಾಗ 400 ಹುದ್ದೆ ಅನುಮೋದಿಸಿರುತ್ತಾರೆ ಅಂತ ತಿಳಿಸಿದರು.
