ಉದಯವಾಹಿನಿ, ವಾಷಿಂಗ್ಟನ್ : ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಉಲ್ಬಣಗೊಂಡ ನಂತರ ಟೆಹ್ರಾನ್‌ಗೆ ಭೇಟಿ ನೀಡಿದ ಮೊದಲ ವಿದೇಶಿ ನಾಯಕ ಎಂಬ ಹೆಗ್ಗಳಿಕೆಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಪಾತ್ರರಾಗಿದ್ದಾರೆ. ಆದರೆ, ಈ ಭೇಟಿಯು ಶಾಂತಿಗಾಗಿ ನಡೆದ ಪ್ರಯತ್ನವೋ ಅಥವಾ ಅಮೆರಿಕಕ್ಕೆ ನೀಡುತ್ತಿರುವ ಎಚ್ಚರಿಕೆಯೋ ಎಂಬ ಚರ್ಚೆ ಈಗ ಶುರುವಾಗಿದೆ. ಫಾಕ್ಸ್ ನ್ಯೂಸ್ ವರದಿಯ ಪ್ರಕಾರ, ಮುನೀರ್ ಅವರು ಕೇವಲ ರಾಜತಾಂತ್ರಿಕ ಅಧಿಕಾರಿಯಲ್ಲ. ಅವರು 2016-17ರಲ್ಲಿ ಪಾಕಿಸ್ತಾನದ ಮಿಲಿಟರಿ ಗುಪ್ತಚರ ಮುಖ್ಯಸ್ಥರಾಗಿದ್ದ ಕಾಲದಿಂದಲೂ ಇರಾನ್‌ನ ಅತ್ಯಂತ ಪ್ರಭಾವಶಾಲಿ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’  ನೊಂದಿಗೆ ಆಳವಾದ ಸಂಬಂಧ ಹೊಂದಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್ ದಾಳಿಯಲ್ಲಿ ಕೊಲ್ಲಲ್ಪಟ್ಟ ಇರಾನ್‌ನ ಪ್ರಮುಖ ಕಮಾಂಡರ್‌ಗಳಾದ ಖಾಸಿಮ್ ಸೊಲೈಮಾನಿ ಮತ್ತು ಹೊಸೈನ್ ಸಲಾಮಿ ಅವರೊಂದಿಗೆ ಮುನೀರ್ ವೈಯಕ್ತಿಕ ಸ್ನೇಹ ಹೊಂದಿದ್ದರು ಎಂಬುದು ಈಗ ಬಯಲಾಗಿದೆ. ಮುನೀರ್ ಅವರ ಈ ಹಿನ್ನೆಲೆಯು ಅಮೆರಿಕದ ಭದ್ರತಾ ತಜ್ಞರಲ್ಲಿ ಆತಂಕ ಮೂಡಿಸಿದೆ.
ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನವು ನಮ್ಮ ಮಿತ್ರನಂತೆ ನಟಿಸಿ ತಾಲಿಬಾನ್‌ಗೆ ಬೆಂಬಲ ನೀಡಿದ ವಿಶ್ವಾಸಘಾತುಕ ಇತಿಹಾಸ ಹೊಂದಿದೆ. ಈಗ ಐಆರ್‌ಜಿಸಿ (IRGC) ಜೊತೆ ಮುನೀರ್ ಹೊಂದಿರುವ ನಿಕಟ ಸಂಬಂಧಗಳು ಟ್ರಂಪ್ ಆಡಳಿತಕ್ಕೆ ಮುಂದೊಂದು ದಿನ ದೊಡ್ಡ ಹೊಡೆತ ನೀಡಬಹುದು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!