ಉದಯವಾಹಿನಿ, ನವದೆಹಲಿ: ಕತ್ತು ಸೀಳಿ ನಿವೃತ್ತ ಆರ್‌ಬಿಐ ಅಧಿಕಾರಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೆಹಲಿಯ ಪಂಚಕುಯಿಯನ್ ಪ್ರದೇಶದಲ್ಲಿ ನಡೆದಿದೆ.
ಮಾಧೋ ರಾಮ್ ಕೊಲೆಯಾದ ಅಧಿಕಾರಿ. ಎರಡು ವರ್ಷಗಳ ಹಿಂದೆ ಆರ್‌ಬಿಐ ಅಧಿಕಾರಿ ಹುದ್ದೆಯಿಂದ ನಿವೃತ್ತಿ ಹೊಂದ್ದಿದ್ದರು ಎಂದು ತಿಳಿದುಬಂದಿದೆ. ಕುಟುಂಬಸ್ಥರ ಮಾಹಿತಿ ಪ್ರಕಾರ, ಮೃತರ ಪತ್ನಿ ಸೀಮಾಪುರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದರು. ಈ ವೇಳೆ ಮನೆಯಲ್ಲಿ ಮೃತ ವ್ಯಕ್ತಿ ಒಬ್ಬರೇ ಇದ್ದಾಗ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ ಎಂದರು. ಮೃತರ ಮಗಳು ಶಿವಾನಿ ಮಾತನಾಡಿ, ನಾನು ನೆಲಮಹಡಿಯಲ್ಲಿದ್ದೆ. ಅಕ್ಕಪಕ್ಕದ ಮನೆಯವರು ನನ್ನನ್ನು ಎಬ್ಬಿಸಿದ್ದರು. ಬಳಿಕ ಮೇಲಕ್ಕೆ ಓಡಿ ಹೋದಾಗ ನನ್ನ ತಂದೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕುತ್ತಿಗೆಯಿಂದ ರಕ್ತ ಬರುತ್ತಿತ್ತು. ನೋಡೋಕೆ ಆಗಲಿಲ್ಲ ಎಂದು ಭಾವುಕರಾದರು.

Leave a Reply

Your email address will not be published. Required fields are marked *

error: Content is protected !!