ಉದಯವಾಹಿನಿ, ಹೈದರಾಬಾದ್: ಎನ್‌ಡಿಎ ಮತ್ತು ಇಂಡಿಯಾ ಯಾವುದೇ ಒಕ್ಕೂಟದಲ್ಲಿ ನಾವಿಲ್ಲ, ಯಾವುದಕ್ಕೂ ಸೇರುವ ಇಚ್ಛೆಯೂ ನಮಗೆ ಇಲ್ಲ ಎಂದು ಭಾರತೀಯ ರಾಷ್ಟ್ರೀಯ ಪಕ್ಷದ(ಬಿಆರ್‌ಎಸ್) ವರಿಷ್ಠ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತಂತೆ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿರುವ ಅವರು, ‘ಎನ್‌ಡಿಎ ಮತ್ತು ಇಂಡಿಯಾ ಯಾವುದೇ ಒಕ್ಕೂಟಕ್ಕೂ ನಾವು ಸೇರಿಲ್ಲ, ಯಾವುದಕ್ಕೂ ಸೇರುವ ಇಚ್ಛೆಯೂ ನಮಗೆ ಇಲ್ಲ.ಹಾಗಂತ ನಾವು ಏಕಾಂಗಿ ಅಲ್ಲ. ನಮಗೂ ಗೆಳೆಯರ ಬಳಗ ಇದೆ. ‘ಇಂಡಿಯಾ’ ಎಂಬ ಹೊಸ ಒಕ್ಕೂಟದಲ್ಲಿ ಏನಿದೆ ವಿಶೇಷ? 50 ವರ್ಷ ಅಧಿಕಾರದಲ್ಲಿದ್ದ ಅವರು ಯಾವುದೇ ಬದಲಾವಣೆ ತರಲಿಲ್ಲ’ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ, ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ನಾಯಕರ ಸಭೆಯಿಂದಲೂ ಬಿಆರ್‌ಎಸ್ ಪಕ್ಷ ದೂರ ಉಳಿದಿತ್ತು. ಬೆಂಗಳೂರಿನಲ್ಲಿ ಸಭೆ ಸೇರಿದ್ದ ವಿಪಕ್ಷಗಳ ನಾಯಕರು 2024ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ವಿರುದ್ಧ ಒಗ್ಗಟ್ಟಿನ ಹೋರಾಟ ಸಂಘಟಿಸಲು ಇಂಡಿಯಾ ಎಂಬ ಒಕ್ಕೂಟ ಘೋಷಣೆ ಮಾಡಿದ್ದವು.
