ಉದಯವಾಹಿನಿ, ಚಿತ್ತೋರ್‌ಗಢ(ರಾಜಸ್ಥಾನ): ಇಲ್ಲಿನ ಶ್ರೀ ಸನ್ವಾಲಿಯಾಜಿ ದೇವಸ್ಥಾನ ಮಂಡಳಿಯ ಉದ್ಯೋಗಿ ರಾಜೇಂದ್ರ ಶರ್ಮಾ ಎಂಬವರು ತಮ್ಮ ಮಗಳು ಆಯುಷಿ ಅವರ ವಿವಾಹವನ್ನು ಗೋಶಾಲೆಯಲ್ಲೇ ನೆರವೇರಿಸಿ, ಗಮನ ಸೆಳೆದಿದ್ದಾರೆ. ಹಸುಗಳ ಸಮ್ಮುಖದಲ್ಲಿ ವಿವಾಹ ಪ್ರತಿಜ್ಞೆಗಳ ವಿನಿಮಯ ನಡೆಯಿತು. ಸರಳವಾಗಿ ನಡೆದ ಮದುವೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜೇಂದ್ರ ಶರ್ಮಾ ಅವರ ಗುರುಗಳಾದ ಧೀರೇಂದ್ರ ಶಾಸ್ತ್ರಿ ದೇವಾಲಯ ಅಥವಾ ಗೋಶಾಲೆಯಲ್ಲಿ ವಿವಾಹ ವಿಧಿಗಳನ್ನು ನಡೆಸುವಂತೆ ಸಲಹೆ ನೀಡಿದ್ದರು. ಹಿಂದೂ ಧರ್ಮದಲ್ಲಿ ಹಸುವನ್ನು ಅತ್ಯಂತ ಪವಿತ್ರವೆಂದು ಮತ್ತು ಅದರ ದೇಹದಲ್ಲಿ 33 ಕೋಟಿ ದೇವಾನುದೇವತೆಗಳು ವಾಸಿಸುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ ಇಲ್ಲಿ ವಿವಾಹ ನೆರವೇರಿಸುವಂತೆ ಶಾಸ್ತ್ರಿ ಸಲಹೆ ನೀಡಿದ್ದರು. ಗುರುಗಳ ಸಲಹೆಯಂತೆ ರಾಜೇಂದ್ರ ಶರ್ಮಾ ತಮ್ಮ ಮಗಳ ಮದುವೆಯನ್ನು ಸನ್ವಾಲಿಯಾಜಿಯಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿರುವ ಚಿಕರ್ಡಾ ಪಟ್ಟಣದಲ್ಲಿರುವ ಶ್ರೀ ಮಹಾವೀರ ಗೋಶಾಲೆಯಲ್ಲಿ ಹಸುಗಳ ಮುಂದೆ ನೆರವೇರಿಸಿದ್ದಾರೆ. ಹಸುಗಳಿಗೆ 56 ಬಗೆಯ ನೈವೇದ್ಯವನ್ನು ಈ ಸಂದರ್ಭದಲ್ಲಿ ನೀಡಲಾಯಿತು.
