ಉದಯವಾಹಿನಿ, ಚಿಕ್ಕಮಗಳೂರು: ಮಲ್ಲಿಕಾರ್ಜುನ ಖರ್ಗೆಯವರೇ ನೀವು ಮಾನಸಿಕ ಅಸ್ವಸ್ಥರಂತೆ ಹೇಳಿಕೆ ಕೊಡ್ತಿದ್ದೀರಿ, ನಿಜವಾದ ಭಯೋತ್ಪಾದಕರನ್ನು ನಿಮ್ಮ ಪಕ್ಷದವ್ರು ಬ್ರದರ್ಸ್ ಅಂತಾರೆ ಎಂದು ಬಿಜೆಪಿ ಎಂಎಲ್‌ಸಿ ಸಿ.ಟಿ ರವಿ ಕಿಡಿಕಾರಿದ್ದಾರೆ.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮೋದಿ ಭಯೋತ್ಪಾದಕ ಎಂಬ ಖರ್ಗೆ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಖರ್ಗೆ ಅವರೇ, ನಿಮ್ಮ ಹೇಳಿಕೆ 6 ದಶಕಗಳ ರಾಜಕೀಯ ಅನುಭವಕ್ಕೆ ತಕ್ಕದ್ದಾಗಿಲ್ಲ. ಮಾನಸಿಕ ಅಸ್ವಸ್ಥರ ರೀತಿ ಹೇಳಿಕೆ ಕೊಡ್ತಿದ್ದೀರಿ. ನೀವು ಮೆಂಟಲ್ ಆಸ್ಪತ್ರೆಯ ರೋಗಿಯಂತೆ ವರ್ತಿಸುತ್ತಿದ್ದೀರಿ ಎಂದು ಜನ ಭಾವಿಸಿದ್ದಾರೆ. ನಿಜವಾದ ಭಯೋತ್ಪಾದಕರನ್ನು ನಿಮ್ಮ ಪಕ್ಷದ ಮುಖಂಡರು ಬ್ರದರ್ಸ್ ಎಂದು ಕರೆಯುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ನಿಮ್ಮ ಪಕ್ಷ ಮೊಹಬತ್ ಕಾ ದುಖಾನ್ ಮಾತನಾಡ್ತಿತ್ತು. ನೀವು ಮಾರ್ಕೆಟಿಂಗ್ ಮಾಡ್ತಿರೋದು ನಫರತ್ ಕಾ ದುಖಾನ್. ಗುಜರಾತ್ ಜನ ಅನಕ್ಷರಸ್ಥರು, ಮೋದಿ ಭಯೋತ್ಪಾದಕ ಎಂದಿದ್ದೀರಿ. ಬಿಜೆಪಿ, ಆರ್.ಎಸ್.ಎಸ್ ವಿಷಜಂತು, ಅದನ್ನು ಕೊಲ್ಲಿ ಎಂದು ಮುಸ್ಲಿಮರನ್ನು ಎತ್ತಿಕಟ್ಟುವ ಕೆಲಸ ಮಾಡ್ತಿದ್ದೀರಿ. ಭಯೋತ್ಪಾದನೆ ನಡೆದಾಗ ಭಯೋತ್ಪಾದಕರ ಬಗ್ಗೆ ಸಿಂಪಥಿ ಬರುವಂತೆ, ಸಣ್ಣ ವಿಚಾರದಂತೆ ಮಾತನಾಡ್ತಾರೆ. ಮಾನಸಿಕ ದೌರ್ಬಲ್ಯಗಳ ಸುಳಿಗೆ ನೀವು ಸಿಲುಕಿದ್ದೀರಿ. ನೀವು ನಿಮ್ಮ ಪಕ್ಷವನ್ನು ಎದುರಿಸಲಾಗದ ಅಸಹಾಯಕ ಸ್ಥಿತಿಯಲ್ಲಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ. ನೀವು ಕರ್ನಾಟಕದ ಉನ್ನತ ಸ್ಥಾನದಲ್ಲಿದ್ದೀರಿ, ರಾಜ್ಯಕ್ಕೆ ಗೌರವ ತರುತ್ತೀರಾ ಎಂದು ಭಾವಿಸಿದ್ವಿ. ನಿಮ್ಮ ಹೇಳಿಕೆ ಕರ್ನಾಟಕ-ಕನ್ನಡಿಗರ ಗೌರವವನ್ನ ಹಾಳು ಮಾಡುವ ರೀತಿ ಇದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!