ಉದಯವಾಹಿನಿ, ಬೆಂಗಳೂರು: ಕಸ ಹಾಕಿ ಬರೋದಾಗಿ ಮನೆಯಿಂದ ಹೊರಗೆ ಬಂದ ಮಹಿಳೆ ಪ್ರಿಯಕರನ ಜೊತೆ ಪರಾರಿಯಾಗಿದ್ದಾರೆ. ಇತ್ತ ಗಂಡ ಎರಡು ಮಕ್ಕಳನ್ನು ಬಿಟ್ಟು ತನ್ನ ಪತ್ನಿ ಪರ ಪುರುಷನ ಜೊತೆ ಓಡಿ ಹೋಗಿದ್ದಾಳೆಂದು ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಬಾಗಲಗುಂಟೆಯಲ್ಲಿ ಈ ಘಟನೆ ನಡೆದಿದೆ. ನಾಪತ್ತೆಯಾದ ಪ್ರಿಯಾಂಕಾ ಮತ್ತು ಪತಿ ಶರತ್ ಕುಮಾರ್‌ಗೆ ಇಬ್ಬರು ಮಕ್ಕಳಿದ್ದು, ಬಾಗಲಗುಂಟೆಯಲ್ಲಿ ವಾಸವಾಗಿದ್ದರು.

ಈ ಸಂಬಂಧ ಬಾಗಲಗುಂಟೆಯಲ್ಲಿ ಪತಿ ದೂರು ದಾಖಲಿಸಿದ್ದು, ಕಸ ಹಾಕಿ ಬರುವುದಾಗಿ ಹೇಳಿ ಮನೆಯಿಂದ ಹೊರಟು ಪರಪುರುಷನೊಂದಿಗೆ ಪರಾರಿಯಾಗಿದ್ದಾಳೆ. ನಾನು ಮನೆಯಲ್ಲಿರುವಾಗಲೇ ಪ್ರಿಯಾಂಕಾ ತನ್ನ ಪ್ರಿಯಕರ ಪ್ರಭು ಜೊತೆ ಹೋಗಿದ್ದಾಳೆ. ಅಷ್ಟೇ ಅಲ್ಲದೆ, ಊಟದಲ್ಲಿ ನಿದ್ದೆ ಮಾತ್ರೆ ಹಾಕಿ ಪರಾರಿಯಾಗಿದ್ದಾಳೆ ಎಂಬ ಆರೋಪಿಸಿದ್ದಾರೆ. ನಾನು ಕೆಲಸಕ್ಕೆ ಹೋದ ಸಮಯದಲ್ಲಿ ಏರಿಯಾದಲ್ಲಿ ಕಟಿಂಗ್ ಶಾಪ್ ನಡೆಸುತ್ತಿದ್ದ ಪ್ರಭು ಎಂಬಾತನನ್ನು ಭೇಟಿಯಾಗುತ್ತಿದ್ದಳು. ಜೊತೆಗೆ ಪ್ರಭು ಪ್ರಿಯಾಂಕಾಗೆ ಮೊಬೈಲ್ ಕರೆನ್ಸಿ ಹಾಕಿಸುತ್ತಿದ್ದ. ಇದೇ ವಿಚಾರಕ್ಕಾಗಿ ನಡುವೆ ಆಗಾಗ ಜಗಳ ಆಗುತ್ತಿತ್ತು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!