ಉದಯವಾಹಿನಿ, ತುಮಕೂರು: ಜಿಲ್ಲೆಯ ವಿವಿಧ ಭಾಗದಲ್ಲಿ 32 ನವಿಲುಗಳ ಸಾವನ್ನಪ್ಪಿದ್ದು, ಹೀಟ್‌ಸ್ಟ್ರೋಕ್‌ನಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ತುಮಕೂರು ತಾಲೂಕಿನ ಬೊಮ್ಮನಹಳ್ಳಿ, ಕೋಳಿಹಳ್ಳಿ, ಭೈರಸಂದ್ರ, ಹುಲ್ಲೆನಹಳ್ಳಿ ಗ್ರಾಮದಲ್ಲಿ ಏ.16ರಿಂದ 21ರವರೆಗೆ ಒಟ್ಟು 32 ನವಿಲುಗಳ ಸಾವನ್ನಪ್ಪಿವೆ. ಹೀಟ್‌ಸ್ಟ್ರೋಕ್‌ನಿಂದ ಸಾವನ್ನಪ್ಪಿರಬಹುದು ಎನ್ನಲಾಗಿದೆ. ಸದ್ಯ ಮೃತ ನವಿಲುಗಳ ಮರಣೋತ್ತರ ಪರೀಕ್ಷೆಗಾಗಿ ಅಂಗಾಂಶಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ವರದಿ ಬಂದ ಬಳಿಕ ಸಾವಿನ ಕಾರಣ ಪತ್ತೆಯಾಗಲಿದೆ.

 

Leave a Reply

Your email address will not be published. Required fields are marked *

error: Content is protected !!