ಉದಯವಾಹಿನಿ, ಟೆಹ್ರಾನ್: ತನ್ನ ಮೇಲೆ ದಾಳಿ ನಡೆಸಿದ್ದಕ್ಕೆ ಮಧ್ಯಪ್ರಾಚ್ಯದ ದೇಶಗಳ ಮೇಲೆ ಡ್ರೋನ್, ಕ್ಷಿಪಣಿ ದಾಳಿ ನಡೆಸಿದ್ದ ಇರಾನ್ ಈಗ ಸಮುದ್ರದೊಳಗಿನ ಡೇಟಾ ಕೇಬಲ್‌ಗಳನ್ನು ಕತ್ತರಿಸುವ ಬೆದರಿಕೆ ಹಾಕಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಮುಖವಾಣಿ ಎಂದು ಪರಿಗಣಿಸಲಾದ ತಸ್ನಿಮ್ ನ್ಯೂಸ್ ಏಜೆನ್ಸಿ ಸವಿಸ್ತಾರವಾದ ವರದಿಯನ್ನು ಪ್ರಕಟಿಸಿದೆ. ವರದಿಯಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಅಂಡರ್-ಸೀ ಇಂಟರ್ನೆಟ್ ಕೇಬಲ್‌ಗಳು ಮತ್ತು ಕೊಲ್ಲಿ ದೇಶಗಳಲ್ಲಿರುವ ಡೇಟಾ ಸೆಂಟರ್‌ಗಳ ನಕ್ಷೆಯನ್ನು ತೋರಿಸಿದೆ.
ಈ ಮೂಲಸೌಕರ್ಯಗಳನ್ನು ನಾವು ಸುಲಭವಾಗಿ ಹಾನಿ ಮಾಡಬಹುದು ಎಂಬುದನ್ನು ಈ ವರದಿ ಎತ್ತಿ ತೋರಿಸಿದೆ. ಈ ವರದಿ ಪ್ರಕಟವಾದ ಬೆನ್ನಲ್ಲೇ ಇರಾನ್ ವಿಶ್ವಕ್ಕೆ ನೀಡಿದ ಕಾರ್ಯತಂತ್ರದ ಎಚ್ಚರಿಕೆಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವಿಶ್ಲೇಷಿಸಿವೆ. ವರದಿಯು ಹಾರ್ಮುಜ್ ಜಲಸಂಧಿಯನ್ನು ಕೇವಲ ತೈಲ ಮಾರ್ಗವಾಗಿ ಮಾತ್ರವಲ್ಲದೆ ಜಾಗತಿಕ ಡಿಜಿಟಲ್ ಹೆದ್ದಾರಿ( ಎಂದು ಬಣ್ಣಿಸಿದೆ.
