ಉದಯವಾಹಿನಿ ತಾಳಿಕೋಟೆ: ತಾಲೂಕಿನ ಹಿರೂರ ಗ್ರಾಮ ಪಂಚಾಯತ ನೂತನ ಅಧ್ಯಕ್ಷರಾಗಿ ಸುರೇಶ ಬಿರಾದಾರ ಹಾಗೂ ಉಪಾಧ್ಯಕ್ಷರಾಗಿ ಶಾರದಾ ಹಾದಿಮನಿ ಆಯ್ಕೆಯಾದರು.
ಬುಧವಾರ ನಡೆದ ಅಧ್ಯಕ್ಷ, ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ, ಹಿಂದುಳಿದ ಬ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಸುರೇಶ ಬಿರಾದಾರ ಹಾಗೂ ರಾಮನಗೌಡ ಚೌದ್ರಿ ನಾಮ ಪತ್ರ ಸಲ್ಲಿಸಿದ್ದರು. ಚುನಾವಣೆ ನಡೆದಾಗ ಸುರೇಶ ಬಿರಾದಾರಗೆ 10 ಹಾಗೂ ರಾಮನಗೌಡ ಚೌದ್ರಿ ಅವರಿಗೆ 9 ಮತಗಳು ಲಭಿಸಿದ್ದರಿಂದ ಸುರೇಶ ಬಿರಾದಾರ ಅಧ್ಯಕ್ಷರಾಗಿ ಆಯ್ಕೆಯಾದರು. ಸಾಮಾನ್ಯ ಮಹಿಳೆಗೆ ಮೀಸಲಾದ ಉಪಾದ್ಯಕ್ಷ ಸ್ಥಾನಕ್ಕೆ ನೀಲಮ್ಮ ಬಿರಾದಾರ ಮತ್ತು ಶಾರದಾ ಹಾದಿಮನಿ ನಾಮಪತ್ರ ಸಲ್ಲಿಸಿದರು. ಶಾರದಾ ಅವರಿಗೆ 10 ಹಾಗೂ ನೀಲಮ್ಮ ಅವರಿಗೆ ೯ ಮತಗಳು ಲಭಿಸಿದ್ದರಿಂದ ಶಾರದಾ ಹಾದಿಮನಿ ಉಪಾದ್ಯಕ್ಷರಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸುಭಾಶಚಂದ್ರ ಟಾಕಳೆ, ಸಹಾಕರಾಗಿ ಪಿಡಿಓ ಸಿ.ಎಸ್.ಮಠ, ಕಾರ್ಯದರ್ಶಿ ಎ.ಎಚ್.ಬಿರಾದಾರ ಕಾರ್ಯನಿರ್ವಹಿಸಿದರು. ಮುಖಂರುಗಳಾದ ಬಸನಗೌಡ ಬಗಲಿ, ಚಂದ್ರಶೇಖರ ಕನಕರೆಡ್ಡಿ, ವಿಶ್ವನಾಥ ಚಲವಾದಿ, ಬಸವರಾಜ ಬಡಿಗೇರ, ಚಂದ್ರಶೇಖರ ಸಾಸನೂರ, ಸಿದ್ದನಗೌಡ ಅಂಗಡಗೇರಿ, ಶ್ರೀಶೈಲ ಚೌದ್ರಿ, ಮಲ್ಲು ನಾಟಿಕಾರ, ಸಂತೋಷ ದೊಡಮನಿ, ನಾನಾಗೌಡ ಹೊಸಹಳ್ಳಿ, ಬಸನಗೌಡ ಕುಂಠರೆಡ್ಡಿ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಎಸೈ ರಾಮನಗೌಡ ಸಂಕನಾಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಕೈಕೊಳ್ಳಲಾಯಿತು.
