
ಉದಯವಾಹಿನಿ ಹುಣಸಗಿ: ಮತಕೇತ್ರದಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೇನೆ ಅದು ನನಗಂತೂ ಭಾರಿ ಸಂತೃಪ್ತಿ ಇದೆ ಎಂದು ಮಾಜಿ ಶಾಸಕ ರಾಜುಗೌಡ ಹೇಳಿದರು.
ಪಟ್ಟಣದ ಹೊರ ವಲಯದಲ್ಲಿನ ಕೊಜ್ಜಾಪುರ ಗ್ರಾಮದೇವತೆಯ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಬಿಜೆಪಿ ವತಿಯಿಂದ ನಡೆದ ವನಭೋಜನ ಹಾಗೂ ವನಮಹೋತ್ಸವ ಮತ್ತು ಬಿಜೆಪಿ ಕಾರ್ಯಕರ್ತರ ಕಾರ್ಯಕಾರಿಣಿ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮೊನ್ನೆಯ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವುದಕ್ಕೆ ನಾನೇನು ನಿರಾಶನಾಗಿಲ್ಲ ಆದರೆ ಒಂಚೂರು ಬೇಜಾರಾಗಿತ್ತಷ್ಟೆ. ಚುನಾವಣೆಯಲ್ಲಿ ಸೋಲು, ಗೆಲುವು ಇದ್ದದ್ದೆ, ನನಗೆ ಇವೆರಡರ ಅನುಭವವೂ ಇದೆ. ಮುಂದಿನ ದಿನಗಳಲ್ಲಿ ನಾವೆಲ್ಲಿ ತಪ್ಪಿದ್ದೇವೆಂಬುದರ ಬಗ್ಗೆ ತಿಳಿದುಕೊಂಡು ಮುಂದೆ ಬಲು ಎಚ್ಚರಿಕೆಯಿಂದ ಹೆಜ್ಜೆ ಇಡೋಣ ಎಂದರು.ಮುಂಬರಲಿರುವ ಜಿ.ಪಂ ಹಾಗು ತಾ.ಪಂ ಹಾಗೂ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ನಮ್ಮದೆ ಗೆಲುವಾಗಲಿದ್ದು, ದೇಶ ವಿರೋಧಿ ಶಕ್ತಿಗಳನ್ನು ಸಂಪೂರ್ಣ ಮಟ್ಟ ಹಾಕಲಾಗುವುದು ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಅಮರನಾಥ ಪಾಟೀಲ್, ಬಿಜೆಪಿಯ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಅರುಣ ಬಿನ್ನಾಡೆ, ಯಾದಗಿರಿ ಜಿಲ್ಲಾಧ್ಯಕ್ಷ ಡಾ;ಶರಣಭೂಪಾಲರಡ್ಡಿ, ವೀರೇಶ ಬಿ.ಚಿಂಚೋಳಿ ಹುಣಸಗಿ, ಜಿಲ್ಲಾ ವಕ್ತಾರ ಹೆಚ್.ಸಿ ಪಾಟೀಲ್, ರಾಜಾ ಹನುಮಪ್ಪನಾಯಕ(ತಾತಾ), ಯಲ್ಲಪ್ಪ ಕುರುಕುಂದಿ, ಜಿ.ಪಂ ಮಾಜಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ಬಿಜೆಪಿ ಮಂಡಲ ಅಧ್ಯಕ್ಷ ಮೇಲಪ್ಪ ಗುಳಗಿ,ವಿರೇಶ ಸಾಹು ಚಿಂಚೋಳಿ ಸೇರಿದಂತೆ ಬಿಜೆಪಿಯ ನಾನಾ ಪದಾಧಿಕಾರಿಗಳು, ಜನಪ್ರತಿನಿಧಿಗಳು,ಮುಖಂಡರು ಭಾಗವಹಿಸಿದ್ದರು.
