ಉದಯವಾಹಿನಿ ಕೊಲ್ಹಾರ: ಪುಷ್ಯ ಮಳೆ ಆಗದಿದ್ದರೆ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ ಆಂಧ್ರಪ್ರದೇಶ ತೆಲಂಗಾಣ ನಾಲ್ಕು ರಾಜ್ಯಗಳು ಸಂಪೂರ್ಣ ಕುಡಿಯುವ ನೀರಿಗೂ ಆಹಾಕಾರ ಪಡಬೇಕಾಗುತ್ತಿತ್ತು ಎಂದು ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಹೇಳಿದರು.ಮಂಗಳವಾರ ರಂದು ಕೊಲ್ಹಾರ ಪಟ್ಟಣದ ಯುಕೆಪಿ ಹತ್ತಿರ ಬಿಜೆಪಿ ಬಸವನಬಾಗೇವಾಡಿ ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ಕೃಷ್ಣಾ ನದಿಗೆ ಬಾಗಿನ ಅರ್ಪಣೆ,ಕಾರ್ಯಕ್ರಮ  ಪ್ರಧಾನಮಂತ್ರಿ ನರೇಂದ್ರ ಮೋದಿಯವರು ೨೦೨೪ ರ ಚುನಾವಣೆಯಲ್ಲಿ ಮಗದೊಮ್ಮೆ ದೇಶದ ಪ್ರಧಾನಮಂತ್ರಿಗಳಾಗಿ ಆಯ್ಕೆಯಾಗಲಿ ಪೂಜೆ ಹಾಗೂ  ಬಿಜೆಪಿ ಮಹಾಸಂಪರ್ಕ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಕೃಷ್ಣಾ ನದಿಯ ಉಗಮ ಸ್ಥಾನ ಮಹಾಬಳೇಶ್ವರ ಹಾಗೂ ಮಹಾರಾಷ್ಟ್ರದಲ್ಲಿ ಮಳೆಯಾಗದಿದ್ದರೆ ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳು ನೀರಿಲ್ಲದೆ ಪರಿತಪಿಸುವಂತಾಗುತ್ತಿತ್ತು ಕಳೆದ 15 ವರ್ಷಗಳಿಂದ ಕೃಷ್ಣಾ ನದಿಯ ಉಗಮಸ್ಥಾನವಾದ ಮಹಾರಾಷ್ಟ್ರದ ಸತಾರ್ ಜಿಲ್ಲೆಯ ಮಹಾಬಳೇಶ್ವರದಲ್ಲಿ ಕಡ್ಲಿಗರ ಹುಣ್ಣಿಮೆ ದಿನದಂದು ಗಂಗಾ ಪೂಜೆ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ಮಾಡಿಕೊಂಡು ಬಂದಿದ್ದೇವೆ ಇದೇ ಜು. 3ರಂದು ಮಹಾಬಲೇಶ್ವರಕ್ಕೆ ಹೊರಡುವ ಮುನ್ನ ಕೃಷ್ಣಾ ನದಿ ಸಂಪೂರ್ಣ ಬರಿದಾಗಿತ್ತು ವಿಜಯಪುರ ಬಾಗಲಕೋಟೆ ಅವಳಿ ಜಿಲ್ಲೆಯ ನೂರಾರು ರೈತರೊಂದಿಗೆ ಮಳೆ, ಬೆಳೆ ಸಮೃದ್ಧವಾಗಿ ಆಗಲಿ ಪ್ರಸಕ್ತ ವರ್ಷವೂ ಮುಂಗಾರು ಮಳೆ ಸರಿಯಾಗಿ ಆಗದ ಕಾರಣ ರೈತರು  ಕಷ್ಟ  ಅನುಭವಿಸುತ್ತಿದ್ದು ಬೆಳೆಗಳು ಬಾಡುತ್ತಿರುವುದರಿಂದ ವರುಣದೇವ ಸಂಪೂರ್ಣವಾಗಿ ಮಳೆ  ಕೊಟ್ಟು ಕೃಷ್ಣಾ ನದಿಯು ತುಂಬಿ ರೈತರ ಬಾಳಲ್ಲಿ ಬೆಳಕು ಚೆಲ್ಲಲಿ ಎಂದು ಪ್ರಾರ್ಥಿಸಿ ಸಂಕಲ್ಪ ಮಾಡಿ ಬಂದಿದ್ದೆವು ಅದರಂತೆ ಪುಷ್ಯ ಮಳೆಯು ಬಹಳಷ್ಟು ಆಗಿ ನಮ್ಮ ಪ್ರಾರ್ಥನೆಗೆ ವರುಣದೇವ ಕೃಪೆ ತೋರಿದ್ದಾನೆ. ಕಾರಣ ಬಾಣಂತಿಗೆ ಹೇಗೆ ಸೀಮಂತ ಮಾಡುತ್ತಾರೋ ಅದರಂತೆ ತುಂಬಿದ ಕಷ್ಟಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶೀಲವಂತ ಹಿರೇಮಠದ ಕೈಲಾಸನಾಥ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು, ಸಿ‌.ಎಂ ಗಣಕುಮಾರ, ಮಂಡಲ ಅಧ್ಯಕ್ಷ ಶಂಕರಗೌಡ ಪಾಟೀಲ, ರಾಜಶೇಖರ್ ಶೀಲವಂತ, ಈರಯ್ಯ ಮಠಪತಿ, ಚಿನ್ನಪ್ಪ ಗಿಡ್ಡಪ್ಪಗೋಳ, ಪ ಪಂ ಸದಸ್ಯ ಅಪ್ಪಾಸಿ ಮಟ್ಟಿಹಾಳ, ಬಾಬು ಬಜಂತ್ರಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!